Monday, April 29, 2024
spot_imgspot_img
spot_imgspot_img

ಸಿಗ್ನಲಿಂಗ್ ಸಮಸ್ಯೆ ಸರಿಪಡಿಸಲು ಹೋದ ಸಿಬ್ಬಂದಿಗಳು : ರೈಲು ಹರಿದು ಮೃತ್ಯು

- Advertisement -G L Acharya panikkar
- Advertisement -

ರೈಲ್ವೆ ಸಿಗ್ನಲಿಂಗ್ ನಲ್ಲಿನ ದೋಷವನ್ನು ಸರಿಪಡಿಸಲು ಹೋದ ಮೂವರು ರೈಲ್ವೆ ಸಿಬ್ಬಂದ್ದಿ ಗಳ ಮೇಲೆ ರೈಲೊಂದು ಹರಿದ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಚೀಫ್ ಸಿಗ್ನಲಿಂಗ್ ಅಧಿಕಾರಿ ವಾಸು ಮಿತ್ರ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ ಸೋಮನಾಥ್ ಉತ್ತಮ್ ಲಾಂಬುತ್ರೆ ಮತ್ತು ಸಹಾಯಕ ಸಚಿನ್ ವಾಂಖೆಡೆ ಎಂದು ಗುರುತಿಸಲಾಗಿದೆ.

ಜ 22 ರಂದು ಉದ್ಯೋಗಿಗಳು ರೈಲ್ವೆ ಸಿಗ್ನಲಿಂಗ್ ಸಮಸ್ಯೆಯೊಂದನ್ನು ಸರಿಪಡಿಸಲು ಪಾಲ್ಘಾರ್‌ನ ವಾಸೈನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತವು ರೈಲ್ವೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದೆ.

ಪಶ್ಚಿಮ ರೈಲ್ವೆ ಅಧಿಕಾರಿಗಳು, ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 50 ಸಾವಿರ ರೂ ತಕ್ಷಣದ ಪರಿಹಾರ ನೀಡಿದ್ದಾರೆ. ಇನ್ನು 15 ದಿನಗಳ ಒಳಗೆ ಮೃತ ನೌಕರರಿಗೆ ಹಾನಿ ಪರಿಹಾರದ ಮೊತ್ತ ಮತ್ತು ಇತರೆ ನೆರವುಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ರೈಲ್ವೆ ಮಜ್ದೂರ್ ಸಂಘ , ರೈಲ್ವೆ ಹಳಿಗಳ ಮೇಲೆ ಕೆಲಸ ಮಾಡುವ ಸಿಬ್ಬಂದಿಯ ಸುರಕ್ಷತಾ ಕ್ರಮಗಳ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದೆ.

- Advertisement -

Related news

error: Content is protected !!