Sunday, June 29, 2025
spot_imgspot_img
spot_imgspot_img

ಉಡುಪಿ: ಪತಿಗೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ಬಿಸಿ ನೀರು ಎರಚಿದ ಪತ್ನಿ

- Advertisement -
- Advertisement -

ಪತ್ನಿಯೊಬ್ಬಳು ತನ್ನ ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಘಟನೆ ಉಡುಪಿಯ ಕಟಪಾಡಿ ಸಮೀಪದ ಮಣಿಪುರದಲ್ಲಿ ನಡೆದಿದೆ

ಮೊಹಮ್ಮದ್ ಅಶ್ರಫ್‌‌ ಎಂಬಾತನಿಗೆ ಆತನ ಪತ್ನಿ ಅಫ್ರೀನ್, ಅತ್ತೆ, ಮಾವ ಹಾಗೂ ಮತ್ತಿತರರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಆಸಿಫ್ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಫ್ರೀನ್ ಹೊರಗಿನಿಂದ ಬಾಗಿಲು ಬಡಿದಿದ್ದು, ಆಸಿಫ್ ಬಾಗಿಲು ತೆರೆದಾಗ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಮೈ ಮೇಲೆ ಎರಚಿದ್ದಾಗಿ, ಘಟನೆಯಲ್ಲಿ ಮುಖ, ದೇಹ, ಎಡಗೈ, ಎದೆ, ಬೆನ್ನು ಬಲಕೈ ಸುಟ್ಟು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಆಸಿಫ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸಿಫ್ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ಹೊಂದಿದ್ದ ಅಫ್ರೀನ್, ಈ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದಳೆನ್ನಲಾಗಿದೆ.
ಘಟನೆ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!