- Advertisement -
- Advertisement -




ಬಂಟ್ವಾಳ : ಯುವಕನೋರ್ವ ತಾನು ಕೆಲಸ ಮಾಡುತ್ತಿದ್ದ ಟಯರ್ ರಿಸೋಲ್ ಅಂಗಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಿ.ಸಿ.ರೋಡಿನ ಗಾಣದಪಡ್ಪಿನಲ್ಲಿ ನಡೆದಿದೆ.
ಬಿಹಾರದ ಮೂತಿಹಾರ್ ಜಿಲ್ಲೆಯ ಬ್ರಾಮಿಪುರ ನಿವಾಸಿ ಸಂದೀಪ್ ಕುಮಾರ್ (20) ಆತ್ಮಹತ್ಯೆಗೆ ಶರಣಾದ ಯುವಕ.
ಅವರು 3 ವರ್ಷಗಳಿಂದ ತನ್ನ ಮಾವ ಕೆಲಸ ಮಾಡುತ್ತಿದ್ದ ಟಯರ್ ರಿಸೋಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಜೆ ಇದ್ದು. ಮಾವನ ಮನೆಗೆ ಊಟಕ್ಕೆ ಬಾರದೇ ಇರುವುದರಿಂದ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಬಳಿಕ ಅಂಗಡಿಗೆ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -