Friday, June 27, 2025
spot_imgspot_img
spot_imgspot_img

ಕಾರವಾರ : ಯುವತಿ ನಾಪತ್ತೆ

- Advertisement -
- Advertisement -

ಕಾರವಾರ : ಮನೆಯಲ್ಲಿ ಯಾರಿಗೂ ಹೇಳದೇ ಹೊರ ಹೋದ ಯುವತಿಯೋರ್ವಳು ಮನೆಗೂ ಬಾರದೇ ,ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾದ ಘಟನೆ ಕಾರವಾರ ಸೀಬರ್ಡ್ ಕಾಲೋನಿ, ಚಿತ್ತಾಕುಲ ಎಂಬಲ್ಲಿ ನಡೆದಿದೆ.

ಸೀಬರ್ಡ್ ಕಾಲೋನಿ, ಚಿತ್ತಾಕುಲ ನಿವಾಸಿ ಸುನೀತಾ ಕಿರಣ ಲಮಾಣಿ ( 20 ) ಕಾಣೆಯಾದ ಯುವತಿ.

10 ಎಪ್ರಿಲ್ 2024 ರಂದು ಬೆಳಿಗ್ಗೆ 5 ಗಂಟೆಗೆ ಯಾರಿಗೂ ಹೇಳದೇ ಮನೆಯಿಂದ ಹೋದವಳು, ಮನೆಗೂ ಬಾರದೇ ,ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾದ್ದಾಳೆ. ಮೂಲತಃ ಈಕೆ ಲಕ್ಷಮೇಶ್ವರ, ಅಕ್ಕಿಗುಂದಿ, ಗದಗ ಜಿಲ್ಲೆಯವರು. ಈಕೆಯ ಕುಟುಂಬ ಕಳೆದ ಕೆಲ ವರ್ಷಗಳಿಂದ ಸದಾಶಿವಗಡ ಚಿತ್ತಾಕುಲದಲ್ಲಿ ವಾಸವಿದ್ದಾರೆ .ಕುಟುಂಬದವರು ಚಿತ್ತಾಕುಲಾ ಠಾಣೆಗೆ ದೂರು ನೀಡಿದ್ದಾರೆ

ಕಾಣೆಯಾದ ಯುವತಿ ಸುನೀತಾ ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, 5.5 ಅಡಿ ಎತ್ತರ, ಕನ್ನಡ, ಕೊಂಕಣಿ, ಲಮಾಣಿ ಭಾಷೆ ಮಾತನಾಡುತ್ತಾಳೆ. ಈಕೆ ಸಾರ್ವಜನಿಕರಿಗೆ ಕಂಡು ಬಂದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆ : 08382-265733, ಮೊಬೈಲ್ ಸಂ: 9480805248 ಪೊಲೀಸ ವೃತ್ತ ನಿರೀಕ್ಷಕರು ಕದ್ರಾ ವೃತ್ತ ಪೋನ ಸಂಖ್ಯೆ: 08382- 265200. ಮೊಬೈಲ್ ಸಂ: 9480805231 ಉತ್ತರ ಕನ್ನಡ ಪೊಲೀಸ್ ಕಂಟ್ರೋಲ್ ರೂಂ ಸಂ:08382-226550 ನ್ನು ಸಂಪರ್ಕಿಸುವಂತೆ ಚಿತ್ತಾಕುಲ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!