Sunday, June 29, 2025
spot_imgspot_img
spot_imgspot_img

ಮನೆಯ ಹಿತ್ತಲಿನಲ್ಲಿ ಅಡಗಿದ್ದವು ರಾಶಿ ರಾಶಿ ನಾಗರಹಾವುಗಳು; ಹೆಡೆ ಎತ್ತಿ ಹೊರ ಬಂದ ತಾಯಿ..!!

- Advertisement -
- Advertisement -

ಮನೆಯ ಸುತ್ತ ಕಳೆದ ಹಲವಾರು ದಿನಗಳಿಂದ ಓಡಾಡುತ್ತಿದ್ದ ನಾಗರ ಹಾವನ್ನು ಗಮನಿಸಿದ ಮನೆಮಂದಿ ಉರಗ ತಜ್ಞರನ್ನು ಕರೆಸಿ ನೋಡಿದಾಗ ಮನೆಯ ಹಿತ್ತಲಲ್ಲಿ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಿಮನಿ ಎಂಬುವವರ ಮನೆಯ ಹಿತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ನಾಗರ ಹಾವೊಂದು ಓಡಾಟ ನಡೆಸುತ್ತಿತು. ಹಾವಿನ ನಡೆ ಕಂಡು ಸಂಶಯಗೊಂಡ ಕುಟುಂಬಸ್ಥರು ಉರಗ ತಜ್ಞರನ್ನು ಕರೆಸಿ ಹಾವು ಹಿಡಿಯಲು ಮುಂದಾಗಿದ್ದಾರೆ.

ಈ ವೇಳೆ ನಾಗರ ಹಾವು 25 ಮರಿಗಳೊಂದಿಗೆ ನೆಲದಡಿ ಅವಿತಿದ್ದನ್ನು ನೋಡಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ. ತಾಯಿ ನಾಗರ ಹಾವನ್ನು ಉರಗ ತಜ್ಞ ಹಿಡಿಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ 25 ನಾಗರ ಹಾವಿನ ಮರಿಗಳು ನೆಲದ ಅಡಿಯಿಂದ ಹೊರ ಬಂದಿವೆ. ಹಾವು ಹಾಗೂ ಹಾವಿನ ಮರಿಗಳನ್ನು ಸೆರೆ ಹಿಡಿದು ಉರಗ ತಜ್ಞ ಹಾವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.

- Advertisement -

Related news

error: Content is protected !!