- Advertisement -
- Advertisement -


ವಿಟ್ಲ: ಮನೆಯ ಕೋಣೆಯಲ್ಲಿ ಅನಾರೊಗ್ಯದಿಂದ ಮಲಗಿದ್ದ ವೃದ್ದೆಯು ಧರಿಸಿದ್ದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ವಿಟ್ಲಪಡ್ನೂರು ಗ್ರಾಮದ ಪಳ್ಳಿಗದ್ದೆ ಎಂಬಲ್ಲಿ ನಡೆದಿದೆ.
ವಿಟ್ಲಪಡ್ನೂರು ಗ್ರಾಮದ ಪಳ್ಳಿಗದ್ದೆ ನಿವಾಸಿ ಬಿ ಎಂ ಇಬ್ರಾಹಿಂರವರ ದೂರಿನಂತೆ, ದಿನಾಂಕ:06-07-2024 ರಂದು ರಾತ್ರಿಯಿಂದ, ಮರುದಿನ ದಿನಾಂಕ 07-07-2024 ರಂದು ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ, ಇಬ್ರಾಹಿಂ ರ ಸಹೋದರನ ಮನೆಯ ಹಿಂಬಾಗಿಲ ಕಿಟಕಿಯ ಸರಳನ್ನು, ಯಾರೋ ಕಳ್ಳರು ಮುರಿದು, ನಂತರ ಅದೇ ಕಿಟಕಿಯ ಮೂಲಕ ಯಾವುದೋ ಸಾಧನದಿಂದ ಮನೆಯ ಹಿಂಬದಿಯ ಬಾಗಿಲನ್ನು ತೆರೆದು, ಮನೆಯ ಒಳಗೆ ಪ್ರವೇಶಿಸಿ, ಮನೆಯ ಕೋಣೆಯಲ್ಲಿ ನಿಶ್ಯಕ್ತರಾಗಿ ಮಲಗಿದ್ದ ತಾಯಿ ಐಸಮ್ಮರವರು ಧರಿಸಿದ್ದ, ಅಂದಾಜು 8 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನವಾಗಿರುವ ಆಭರಣಗಳ ಮೌಲ್ಯ ಸುಮಾರು 48,000/-ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 116/2024 ಕಲಂ:331(4),305 BNS ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ
- Advertisement -