Saturday, June 28, 2025
spot_imgspot_img
spot_imgspot_img

ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ; ಪತಿಯನ್ನು ಬಿಟ್ಟು ಬರುವಂತೆ ಶಾಲಾ ಶಿಕ್ಷಕಿಗೆ ಧಮ್ಕಿ

- Advertisement -
- Advertisement -

ಶಾಲಾ ಶಿಕ್ಷಕಿಯೊಂದಿಗೆ ಸ್ನೇಹದಿಂದ ಇದ್ದ ಓರ್ವ ವ್ಯಕ್ತಿ ಇದೀಗ ಶಿಕ್ಷಕಿ ಮದುವೆಯಾಗುತ್ತಿದ್ದಂತೆಯೇ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕುವುದಲ್ಲದೇ 10 ಲಕ್ಷ ರೂಪಾಯಿ ಹಣ ನೀಡದೆ ಇದ್ರೆ ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್ ಹಾಕುವುದಾಗಿ ಬ್ಲ್ಯಾಕ್​ ಮೇಲ್​ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ ನಡೆದಿದೆ.

ಅಬ್ದುಲ್‌ ಅಸೀಮ್‌ ಎಂಬಾತ ಏಳು ವರ್ಷಗಳಿಂದ ಶಾಲಾ ಶಿಕ್ಷಕಿ ಜೊತೆ ಸ್ನೇಹದಿದ್ದ ಇದ್ದ ವ್ಯಕ್ತಿ. ಈತನೇ ಧಮ್ಕಿ ಆರೋಪ ಹೊತ್ತಿದ್ದಾನೆ.

ಅಬ್ದುಲ್‌ ಅಸೀಮ್‌ ಹಾಗೂ ಮಯೂರ್‌ ಎನ್ನುವವರು ಶಿಕ್ಷಕಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಮಾತ್ರವಲ್ಲದೇ, ಗಂಡನನ್ನು ಬಿಟ್ಟು ಬಾ, ಇಲ್ಲದಿದ್ದರೆ ಖಾಸಗಿ ವೀಡಿಯೋ ವೈರಲ್‌ ಮಾಡುವುದಾಗಿಯೂ, ಹತ್ತು ಲಕ್ಷ ರೂಪಾಯಿ ಹಣ ನೀಡದೆ ಇದ್ದರೆ ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್‌ ಹಾಕುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿರುವ ಘಟನೆ ನಡೆದಿದೆ. ಇದರ ಜೊತೆ ಪತಿಯನ್ನು ಬಿಟ್ಟು ಬರದಿದ್ದರೆ ಹಿಂದೂ-ಮುಸ್ಲಿಂ ಗಲಾಟೆ ಮಾಡಿಸುವುದಾಗಿ ಕಿರುಕುಳ ಕೂಡಾ ನೀಡಿರುವಾಗಿ ವರದಿಯಾಗಿದೆ.

ಶಿಕ್ಷಕಿಯ ಅಶ್ಲೀಲ ವೀಡಿಯೋಗಳನ್ನು ಆಕೆಯ ಪತಿ ಹಾಗೂ ಕುಟುಂಬದವರಿಗೆ ಇವರಿಬ್ಬರು ಕಳುಹಿಸಿದ್ದಾರೆ. ಕಿರುಕುಳದಿಂದ ನೊಂದ ಶಿಕ್ಷಕಿ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

- Advertisement -

Related news

error: Content is protected !!