Saturday, June 28, 2025
spot_imgspot_img
spot_imgspot_img

ಸುಬ್ರಹ್ಮಣ್ಯ: ಲೂಡೋ ಆಡುವಾಗ ವಿಡಿಯೋ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಆರೋಪ; ವ್ಯಕ್ತಿಯ ಮೇಲೆ ಮೂವರು ಹಲ್ಲೆ ನಡೆಸಿ ಜೀವಬೆದರಿಕೆ

- Advertisement -
- Advertisement -

ಸುಬ್ರಹ್ಮಣ್ಯ: ಲೂಡೋ ಆಡುವಾಗ ಪೊಲೀಸ್ ದಾಳಿ ನಡೆದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರ ಮೇಲೆ “ಪೊಲೀಸ್ ನವರಿಗೆ ನೀನೇ ವಿಡಿಯೋ ಮಾಡಿ ಮಾಹಿತಿ ನೀಡಿರುವುದು” ಎಂದು ಆರೋಪಿಸಿ ಮೂವರು ಹಲ್ಲೆ ನಡೆಸಿದ ಘಟನೆ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲಮೊಗ್ರ ಗ್ರಾಮದ ಎ.ಗೋಪಾಲ ಮಣಿಯಾಣಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.

ಆ.28ರ ಸಂಜೆ ವಾಹನದಲ್ಲಿ ಪೇಟೆಗೆ ಹೋಗಿ ಅಲ್ಲಿಂದ ವಾಪಸ್ಸು ತನ್ನ ಮನೆ ಕೊಲ್ಲಮೊಗ್ರು ಗ್ರಾಮದ ಮಿತ್ತೋಡಿ ಎಂಬಲ್ಲಿಗೆ ಹೋಗುವ ಸಂದರ್ಭ ಶಶಿ ತೋಟತ್ತಮಜಲು, ದೇವಿ ತೋಟತ್ತಮಜಲು, ಚಲನ್ ಕೊಪ್ಪಡ್ಕ ಎಂಬವರು ಬೈಕಿನಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, “ನಾವು ಲೂಡೋ ಆಡುವಾಗ ಪೊಲೀಸ್ ನವರಿಗೆ ನೀನೇ ವಿಡಿಯೋ ಮಾಡಿ ಮಾಹಿತಿ ನೀಡಿರುವುದುʼ ಎಂದು ಹೇಳಿ ಮೂರು ಜನರು ಸೇರಿಕೊಂಡು ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಚಾರವನ್ನು ಪೊಲೀಸ್ ನವರಿಗೆ ಮಾಹಿತಿ ನೀಡಿದರೇ “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದು, ಬಳಿಕ ಹಲ್ಲೆಗೊಳಗಾದ ವ್ಯಕ್ತಿ ತನ್ನ ಮಗಳಿಗೆ ಪೋನ್ ಮೂಲಕ ತಿಳಿಸಿ ತಮ್ಮ ವಾಹದನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!