ಮೈಸೂರು: ಕಾರೊಂದರಲ್ಲಿ ಹುಲಿ ಚರ್ಮವನ್ನು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದು, 3.15 ಮೀಟರ್ ಉದ್ದದ ಹುಲಿ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ವಿಶ್ವ ಹುಲಿ ದಿನ ನಡೆದು ಎರಡು ದಿನ ಆಗಿಲ್ಲ, ಕರ್ನಾಟಕದ ಹುಲಿಗಳ ರಾಜದಾನಿ ಪ್ರದೇಶ ಎನ್ನಬಹುದಾದ ಮೈಸೂರಿನಲ್ಲಿ ಇಂದು ಕರ್ನಾಟಕ ಅರಣ್ಯ ಇಲಾಖೆಯ ಮೈಸೂರು ಫಾರೆಸ್ಟ್ ಮೊಬೈಲ್ ಸ್ಕ್ವಾಡ್ ನವರು ಹುಲಿ ಚರ್ಮ ಮತ್ತು ಒಂದು ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆಕಾಶ್ ರಾವ್ ಮತ್ತು ವಿಷ್ಣುಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಹುಲಿ ಚರ್ಮ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದ ತಂಡವು ದಾಳಿಗೆ ಹೊಂಚು ಹಾಕಿತ್ತು. ಇದೇ ವೇಳೆ ಕೆಆರ್‌ಎಸ್ ಕಡೆಯಿಂದ ಮೈಸೂರು ನಗರಕ್ಕೆ ಬರುತ್ತಿದ್ದ ಕೆಂಪು ಬಣ್ಣದ ಕಾರನ್ನು ತಡೆದು ಪರಿಶೀಲಿಸಿದಾಗ ಹುಲಿಯ ಚರ್ಮ ಪತ್ತೆಯಾಗಿದೆ.ಹುಲಿ ಚರ್ಮದ ಗಾತ್ರದ ಪ್ರಮಾಣ ನೋಡಿದರೆ ಹೆಬ್ಬುಲಿಯನ್ನೆ ಬೇಟೆಯಾಡಿರುವ ಸಾಧ್ಯತೆ ಇದೆ. ಆರೋಪಿಗಳು ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಬಳಿಯ ಸಮೇಮಾಲಾ ಮೂಲದವರು ಎಂದು ತಿಳಿದುಬಂದಿದೆ.
ಕಾರ್ಯಾಚಾರಣೆಯ ನೇತೃತ್ವವನ್ನು ಡಿಸಿಎಫ್ ಎ ಟಿ ಪೂವಯ್ಯ ವಹಿಸಿದ್ದರು.
ಮೊಬೈಲ್ ಸ್ಕ್ವಾಡ್‌ನ ಇತರ ಸದಸ್ಯರು ಆರ್.ಎಫ್.ಒ ಲಕ್ಷೀಶ್ , ಡಿ.ಆರ್.ಎಫ್.ಒ ಗಳು – ಮೋಹನ್ ಕುಮಾರ್, ಸುಂದರ್, ಪ್ರಮೋದ್. ,ಅರಣ್ಯ ರಕ್ಷಕರು – ಸತೀಶ್, ಚನ್ನಬವಯ್ಯ, ಗೋವಿಂದ, ಮಹಂತೇಶ್, ರವಿನಂದನ್. ಚಾಲಕರು – ಮಧು ಮತ್ತು ಪುಟ್ಟಸ್ವಾಮಿ.