Sunday, April 28, 2024
spot_imgspot_img
spot_imgspot_img

ಟೋಕಿಯೋ ಪ್ಯಾರಾಲಿಂಪಿಕ್​ ನಲ್ಲಿ ಮತ್ತೊಂದು ಪದಕ ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಿದ ಚಿನ್ನದ ಹುಡುಗಿ ಅವನಿ ಲೇಖಾರ

- Advertisement -G L Acharya panikkar
- Advertisement -

ಭಾರತದ ಚಿನ್ನದ ಹುಡುಗಿ ಅವನಿ ಲೇಖಾರ ಒಂದೇ ಪ್ಯಾರಾಲಿಂಪಿಕ್​​ನ 2 ವಿಭಾಗಗಳಲ್ಲಿ ಪದಕವನ್ನು ಗೆದ್ದ ದೇಶ ಮೊದಲ ಪ್ಯಾರಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವನಿ ಮಹಿಳೆಯರ 50 ಮೀಟರ್​ ಏರ್​ ರೈಫಲ್​ನಲ್ಲಿ ಕಂಚಿನ ಪದಕ ಸಂಪಾದಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಅವನಿ ಈ ಹಿಂದೆ 10 ಮೀಟರ್​ ಏರ್​ ರೈಫಲ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಭಾರತದ ಪದಕ 12ಕ್ಕೆ ಏರಿಕೆಯಾಗಿದೆ.

19 ವರ್ಷ ಪ್ರಾಯದ ಜೈಪುರದ ಈ ಆಟಗಾರ್ತಿ ಪ್ಯಾರಾಲಿಂಪಿಕ್​ನಲ್ಲಿ ಭರ್ಜರಿ ಸಾಧನೆಗೈದಿದ್ದಾರೆ. ಟೋಕಿಯೋ ಗೇಮ್​ನಲ್ಲಿ ಅವನಿ ಇನ್ನೂ ಒಂದು ಆಟದಲ್ಲಿ ಪ್ರದರ್ಶನ ನೀಡಬೇಕಿದೆ. ಈ ಸ್ಪರ್ಧೆಯಲ್ಲೂ ಅವನಿ ಪದಕ ಸಂಪಾದಿಸುವಲ್ಲಿ ಯಶಸ್ವಿಯಾದಲ್ಲಿ ಒಂದೇ ಪ್ಯಾರಾಲಿಂಪಿಕ್​ನಲ್ಲಿ ಮೂರು ಪದಕಗಳನ್ನು ಸಂಪಾದಿಸಿದ ಭಾರತದ ಮೊದಲ ವನಿತೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

- Advertisement -

Related news

error: Content is protected !!