Monday, July 4, 2022
spot_imgspot_img
spot_imgspot_img

ಟೋಲ್ ಗೇಟ್ ಬಳಿ ಕಾರು ಅಪಘಾತ; ನಗರಾಭಿವೃದ್ಧಿ ಸಚಿವ ಶಿಂದೆ ಕೈಗೆ ಗಾಯ!

- Advertisement -
- Advertisement -

ಮುಂಬೈ: ವಾಶಿ ಟೋಲ್‌ಗೇಟ್ ಬಳಿ ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸಚಿವರ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.


ಈ ಕುರಿತು ನವಿ ಮುಂಬೈ ಪೊಲೀಸರು ಮಾಹಿತಿ ನೀಡಿದ್ದು, ಕಾರ್ಯಕ್ರಮ ಒಂದರ ನಿಮಿತ್ತ ಏಕನಾಥ್ ಶಿಂಧೆ ಮುಂಬೈನಿಂದ ವಾಶಿಗೆ ತೆರಳಿದ್ದು, ಸಂಜೆ 4.30ಕ್ಕೆ ವಾಶಿಯಿಂದ ಮತ್ತೆ ಮುಂಬೈಗೆ ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಟೋಲ್ ಗೇಟ್ ಬಳಿ ಕಾರು ಅಪಘಾತವಾಗಿದ್ದು, ಯಾರು ಆತಂಕಪಡುವ ಅಗತ್ಯವಿಲ್ಲ. ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ಸುರಕ್ಷಿತವಾಗಿದ್ದೇನೆ ಎಂದು ಶಿಂಧೆ ಹೇಳಿದ್ದಾರೆ.

- Advertisement -

Related news

error: Content is protected !!