Monday, June 15, 2026
spot_imgspot_img
spot_imgspot_img

ನಾಳೆ (ಆ.6) ಬಂಟರ ಸಂಘ ಮಾಣಿ ವಲಯ (ರಿ) ಬಂಟ್ವಾಳ ತಾಲೂಕು ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ

- Advertisement -
- Advertisement -

ಬಂಟರ ಸಂಘ ಮಾಣಿ ವಲಯ (ರಿ) ಬಂಟ್ವಾಳ ತಾಲೂಕು ವತಿಯಿಂದ ಆಟಿಡೊಂಜಿ ಕೂಟ 6/8/2023 ನೇ ಆದಿತ್ಯವಾರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ ಪಾಳ್ಯ ಪೆರಾಜೆ ಮಾಣಿಯಲ್ಲಿ ನಡೆಯಲಿದೆ.

ಬೆಳಗ್ಗೆ ದೀಪಪ್ರಜ್ವಲನೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ನಡೆಯಲಿದೆ. ಮಧ್ಯಾಹ್ನ ಆಟಿ ತಿಂಗಳ ವಿಶೇಷ ಖಾದ್ಯಗಳನ್ನೊಳಗೊಂಡ ಭೋಜನ ವ್ಯವಸ್ಥೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿAದ ಬಂಟರ ಸಂಘ ಮಾಣಿ ವಲಯದ ಎಲ್ಲಾ ಸದಸ್ಯರಿಗೆ ವಿವಿಧ ಒಳಾಂಗಣ ಆಟೋಟ ಸ್ಪರ್ಧೆಗಳು ನಡೆಯಲಿದೆ.

ಬಿ.ಗಂಗಾಧರ ರೈ, ಅಧ್ಯಕ್ಷರು ಬಂಟರ ಸಂಘ ಮಾಣಿ ವಲಯ (ರಿ) ಇವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಪ್ರಹ್ಲಾದ ಶೆಟ್ಟಿ ಜಡ್ತಿಲ ಸಂಚಾಲಕರು, ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪಾಳ್ಯ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ.

ಶ್ರೀಮತಿ ಪ್ರಪುಲ್ಲಾ ಆರ್.ರೈ ಕಲ್ಲಾಜೆಗುತ್ತು ಇವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ರಾಜೇಶ್ ನಾÊಕ್ ಉಳಿಪ್ಪಾಡಿಗುತ್ತು ಶಾಸಕರು ಬಂಟ್ವಾಳ ಹಾಗೂ ಬಿ. ರಮನಾಥ ರೈ ಮಾಜಿ ಸಚಿವರು ಕರ್ನಾಟಕ ಸರಕಾರ ಭಾಗವಹಿಸಲಿದ್ದಾರೆ. ಕಿರಣ್ ಹೆಗ್ಡೆ ಸ್ಥಾಪಕಾಧ್ಯಕ್ಷರು, ಬಂಟರ ಸಂಘ ಬಂಟ್ವಾಳ ತಾಲೂಕು, ಜಗನ್ನಾಥ ಚೌಟ ಬದಿಗುಡ್ಡೆ ಕಾರ್ಯದರ್ಶಿ ಬಂಟರ ಸಂಘ ಬಂಟ್ವಾಳ ತಾಲೂಕು, ಲೋಕೇಶ್ ಶೆಟ್ಟಿ ಕೆ. ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ ತಾಲೂಕು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.

- Advertisement -

Related news

error: Content is protected !!