Saturday, June 28, 2025
spot_imgspot_img
spot_imgspot_img

ಪಾಕಿಸ್ತಾನದಲ್ಲಿ ಜೈಶ್‌ನ ಪ್ರಮುಖ ಉಗ್ರ ಮೌಲಾನಾ ಅಬ್ದುಲ್ ಅಜೀಜ್ ನಿಗೂಢ ಸಾವು

- Advertisement -
- Advertisement -

ಇಸ್ಲಾಮಾಬಾದ್: ಜೈಶ್-ಎ-ಮೊಹಮ್ಮದ್‌ನ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಮೌಲಾನಾ ಅಬ್ದುಲ್ ಅಜೀಜ್ ಸಾವು ಗುಪ್ತಚರ ವಲಯಗಳಿಂದ ಭಯೋತ್ಪಾದಕ ಜಾಲದವರೆಗೆ ಸಂಚಲನ ಮೂಡಿಸಿದೆ.

ಅಬ್ದುಲ್ ಅಜೀಜ್ ಕಳೆದ ತಿಂಗಳು ಜೈಶ್ ರ‍್ಯಾಲಿಯಲ್ಲಿ ಭಾರತದ ವಿರುದ್ಧ ವಿಷ ಕಾರಿದ್ದ. ಭಾರತವೂ ಯುಎಸ್‌ಎಸ್‌ಆರ್ ನಂತೆಯೇ ಸ್ಥಿತಿಯನ್ನು ಅನುಭವಿಸುತ್ತದೆ ಎಂದು ವೇದಿಕೆ ಮೇಲೆಯೇ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ಇನ್ನು ಜೈಶ್ ಮತ್ತು ಪಾಕಿಸ್ತಾನ ಸರ್ಕಾರ ಆತನ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದೆ. ಆದರೆ ಜೈಶ್ ಜೊತೆ ಸಂಬಂಧ ಹೊಂದಿರುವ ಸಾಮಾಜಿಕ ಮಾಧ್ಯಮ ಖಾತೆಗಳು ಅಬ್ದುಲ್ ಅಜೀಜ್ ಸಾವು ಮತ್ತು ಅಂತ್ಯಕ್ರಿಯೆಯನ್ನು ದೃಢಪಡಿಸಿವೆ.

ಅಬ್ದುಲ್ ಅಜೀಜ್ ಜೈಶ್‌ನ ಪ್ರಮುಖ ಉಗ್ರನಾಗಿದ್ದ. ಆತ ಜೈಶ್-ಎ-ಮೊಹಮ್ಮದ್‌ನ ಪಂಜಾಬ್ ಪ್ರಾಂತ್ಯದಲ್ಲಿ ಮತ್ತು ವಿಶೇಷವಾಗಿ ಬಹಾವಲ್ಪುರ್, ರಾವಲ್ಪಿಂಡಿಯಂತಹ ಪ್ರದೇಶಗಳಲ್ಲಿ ಭಾರತದ ವಿರುದ್ಧ ಯುವಕರನ್ನು ಮೂಲಭೂತವಾದಕ್ಕೆ ಪ್ರಚೋದಿಸುತ್ತಿದ್ದ. ಇದೀಗ ಆತನ ಸಾವು ಜೈಶ್‌ಗೆ, ವಿಶೇಷವಾಗಿ ಸ್ಥಳೀಯ ನೇಮಕಾತಿ ಮತ್ತು ಬ್ರೈನ್‌ವಾಶ್ ಜಾಲಕ್ಕೆ ಆಘಾತ ಉಂಟುಮಾಡಿದೆ.

ಜೈಶ್‌ಗೆ ಸಂಬಂಧಿಸಿದ ಖಾತೆಗಳು ಆತನನ್ನು ಬಹಾವಲ್‌ಪುರದಲ್ಲಿ ಸಮಾಧಿ ಮಾಡಲಾಗಿದೆ ಎಂದು ತಿಳಿಸಿದೆ. ಕೆಲ ವರದಿಗಳ ಪ್ರಕಾರ, ಹೃದಯಾಘಾತದಿಂದ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

- Advertisement -

Related news

error: Content is protected !!