- Advertisement -
- Advertisement -
ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ರಾಜ್ಯದಲ್ಲಿ ನಡೆದ ಅಪಘಾತದಲ್ಲಿ 812 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಂಚಾರಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ರಸ್ತೆ ಖಾಲಿಯಿದೆ ಎಂದು ಅತಿಯಾದ ವೇಗ ಹಾಗೂ ವೀಲ್ಹಿಂಗ್ ಮಾಡಿರುವುದು ಅಪಘಾತಕ್ಕೆ ಕಾರಣ ಎಂದು ತಿಳಿಸಿದೆ.
ಒಟ್ಟು 812 ಮಂದಿ ರಸ್ತೆ ಅಪಘಾತದಿಂದ ಪ್ರಾಣಕಳೆದುಕೊಂಡಿದ್ದಾರೆ. ಈ ಪೈಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 281 ಮಂದಿ ಸಾವು, ರಾಜ್ಯ ಹೆದ್ದಾರಿಯಲ್ಲಿ 241 ಹಾಗೂ ಇನ್ನಿತರ ರಸ್ತೆಗಳಲ್ಲಿ 290 ಮಂದಿ ವಾಹನ ಸವಾರರು ಸಾವನ್ನಪ್ಪಿದ್ದಾರೆ.
ಇನ್ನು ಸಣ್ಣ ಪ್ರಮಾಣದ ಅಪಘಾತ ಅಂದರೆ ಮಾರಕವಲ್ಲದ ಪ್ರಕರಣಗಳ 2314 ಆಗಿದ್ದು, ಈ ಪೈಕಿ 669 ಪ್ರಕರಣಗಳು ನ್ಯಾಷನಲ್ ಹೈವೆಯಲ್ಲಿ ನಡೆದಿದೆ. ಇನ್ನು ಗಾಯಗೊಂಡವರ ಸಂಖ್ಯೆ 3691 ಆಗಿದ್ದು, ಇದರಲ್ಲಿ 1130 ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.
- Advertisement -