Saturday, June 27, 2026
spot_imgspot_img
spot_imgspot_img

ಟ್ರ್ಯಾಕ್ಟರ್ ಹರಿದು ಮೃತಪಟ್ಟ ಬಾಲಕ; ಮನನೊಂದು ಆತ್ಮಹತ್ಯೆಗೆ ಶರಣಾದ ಚಾಲಕ!

- Advertisement -
- Advertisement -

ಚಾಮರಾಜನಗರ: ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಸವಕನಹಳ್ಳಿಪಾಳ್ಯದಲ್ಲಿ ನಡೆದಿದೆ. ಘಟನೆಯಿಂದ ಟ್ರ್ಯಾಕ್ಟರ್ ಚಾಲಕ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತಪಟ್ಟ ಬಾಲಕ ಸವಕನಹಳ್ಳಿ ಪಾಳ್ಯದ ಹರ್ಷ (5) ಆತನ ಸಾವಿಗೆ ನಾನೇ ಕಾರಣವೆಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮೈಸೂರು ವಿವಿ ಪತ್ರಿಕೋದ್ಯಮದ ಸಂಶೋಧನಾ ವಿದ್ಯಾರ್ಥಿ ಸುನಿಲ್(23).

ಕ್ರಿಕೆಟ್ ಟೂರ್ನಮೆಂಟ್ ನಡೆಯುವ ಕಾರಣ ಮೈದಾನವನ್ನು ಸಮತಟ್ಟು ಮಾಡಲು ಸುನಿಲ್ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದನು. ಈ ವೇಳೆ ಮೈದಾನದ ಅಂಚಿನಲ್ಲಿದ್ದ ನಿಂತಿದ್ದ ಬಾಲಕ ಹರ್ಷನಿಗೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಗುದ್ದಿ, ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಆದರೆ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಬಾಲಕ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸುನಿಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿ ಬೇಗೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!