Tuesday, July 1, 2025
spot_imgspot_img
spot_imgspot_img

40 ಬಾರಿ ಸಂಚಾರಿ ನಿಯಮ ಉಲ್ಲಂಘನೆ: ಕೊನೆಗೂ 16,700 ರೂ. ದಂಡ ವಸೂಲಿ

- Advertisement -
- Advertisement -

ಬೆಂಗಳೂರು: 40 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಬೈಕ್ ಸವಾರನನ್ನ ಕೊನೆಗೂ ಪತ್ತೆಹಚ್ಚಿ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ.

ಜೆ.ಬಿ ನಗರ ಸಂಚಾರ ಠಾಣೆ ಎ.ಎಸ್.ಐ ನಾಗೇಶ್, 40 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ವಾಹನ ಸವಾರನಿಂದ ಬರೋಬ್ಬರಿ 16,700 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಟ್ರಾಫಿಕ್ ರೂಲ್ಸ್​ ಬ್ರೇಕ್ ಮಾಡಿ ತಲೆಮರೆಸಿಕೊಂಡು ತಿರುಗಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋಟ್ಯಾಂತರ ರೂಪಾಯಿ ಹಣವನ್ನ ವಸೂಲಿ ಮಾಡುವ ಜವಾಬ್ದಾರಿ ಬೆಂಗಳೂರು ಟ್ರಾಫಿಕ್ ಪೊಲೀಸರ ಮೇಲಿದೆ. ಇದರ ಮುಂದುವರಿದ ಕಾರ್ಯಾಚರಣೆಯ ಒಂದು ಭಾಗವಾಗಿ ನಿನ್ನೆ 16,700 ರೂಪಾಯಿ ದಂಡವನ್ನ ಸಂಗ್ರಹಿಸಲಾಗಿದೆ.

- Advertisement -

Related news

error: Content is protected !!