Friday, April 26, 2024
spot_imgspot_img
spot_imgspot_img

30 ಬಾರಿ ಸಂಚಾರಿ ನಿಯಮ ಉಲ್ಲಂಘಣೆ, ಸಿಕ್ಕಿಬಿದ್ದವ ದಂಡ ಭರಿಸಿದ್ದು ಎಷ್ಟು ಗೊತ್ತಾ?

- Advertisement -G L Acharya panikkar
- Advertisement -

ಬೆಂಗಳೂರು : ಸಂಚಾರಿ ನಿಯಮಗಳ ಪಾಲನೆ ಮಾಡುವುದು ವಾಹನ ಸವಾರರ ಕರ್ತವ್ಯವಾಗಿದೆ. ವಾಹನ ಸವಾರರು ಸೇಫ್ ಆಗಿ ಸಂಚರಿಸೋದಕ್ಕೆ ಉತ್ತಮವಾದ ಕ್ರಮವಾಗಿದೆ. ಆದರೂ ಕೆಲವೊಬ್ಬರು ಸಂಚಾರಿ ನಿಯಮವನ್ನು ಪಾಲಿಸದೇ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪ್ರಕರಣಗಳು ಎಷ್ಟೋ ಇದೆ.

ಇಲ್ಲೋಬ್ಬ 30 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ, ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಬೈಕ್ ಸವಾರನೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿ, ಸಂಚಾರ ತಪಾಸಣೆ ನಡೆಸುತ್ತಿದ್ದಂತ ವಿಜಯನಗರ ಸಂಚಾರಿ ಪೊಲೀಸರಿಗೆ ಸಿಕ್ಕಬಿದ್ದಿದ್ದಾನೆ. ಆ ಬೈಕ್ ಸವಾರನ ಸಂಚಾರಿ ನಿಯಮ ಉಲ್ಲಂಘನೆಯ ಬಗ್ಗೆ ಪರಿಶೀಲನೆ ನಡೆಸಿದಂತ ಪೊಲೀಸರು ಶಾಕ್ ಆಗಿದ್ದಾರೆ, ಯಾಕೆಂದರೆ ಆತ ಬರೋಬ್ಬರಿ 30 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದು ಪತ್ತೆಯಾಗಿತ್ತು.

ಹೀಗೆ ಸಂಚಾರಿ ನಿಯಮ ಉಲ್ಲಂಘಿಸಿದAತ ಬೈಕ್ ಸವಾರನಿಗೆ, 30 ಬಾರಿ ವಿವಿಧ ಸಂಚಾರಿ ನಿಯಮ ಉಲ್ಲಂಘಿಸಿದ0ತ ಪ್ರಕರಣಗಳ ಅಡಿಯಲ್ಲಿ 15 ಸಾವಿರ ರೂಪಾಯಿ ದಂಡವನ್ನು ವಿಜಯನಗರ ಸಂಚಾರಿ ಠಾಣೆಯ ಪಿಎಸ್‌ಐ ಶೈಲಾ ಅವರು ವಿಧಿಸಿದ್ದಾರೆ. ಈ ಮೂಲಕ 30 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ0ತ ಬೈಕ್ ಸವಾರನಿಂದ ಬರೋಬ್ಬರಿ 15 ಸಾವಿರ ದಂಡವನ್ನು ವಸೂಲಿ ಮಾಡಿದ್ದಾರೆ.

- Advertisement -

Related news

error: Content is protected !!