


ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ವಿಸ್ಟೆಕ್ಸ್ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮಾಚರಣೆ ವೇಳೆ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸಂಜಯ್ ಶಾ ಅವರು ಸಾವನಪ್ಪಿದ ಘಟನೆ ನಡೆದಿದೆ.
ಗುರುವಾರ ಸಂಜೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಂಪನಿಯ 25 ನೇ ವಾರ್ಷಿಕೋತ್ಸವದ ಆಚರಣೆಯನ್ನು ಆಯೋಜಿಸಿತ್ತು. ರುವಾರ ಸಂಜೆ, 7:40 ರ ಸುಮಾರಿಗೆ, ಸುಮಾರು 700 ಜನರು ಲೈಮ್ ಲೈಟ್ ಗಾರ್ಡನ್‌ನಲ್ಲಿ ಈವೆಂಟ್‌ನ ಮುಖ್ಯಾಂಶಗಳಲ್ಲಿ ಏರಿಯಲ್ ಶೋ ನೋಡಲು ಸೇರಿದ್ದರು. ಸಾಫ್ಟ್‌ವೇರ್ ಸಂಸ್ಥೆ ವಿಸ್ಟೆಕ್ಸ್‌ನ ಸಿಇಒ ಸಂಜತ್ ಶಾ ಮತ್ತು ಕಂಪನಿ ಅಧ್ಯಕ್ಷ ರಾಜು ದಾಟ್ಲಾ ಗುರುವಾರ ಸಂಜೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಬ್ಬಿಣದ ಪಂಜರದ ಮೂಲಕ ವೇದಿಕೆಗೆ ಇಳಿಯಲು ಉದ್ದೇಶಿಸಿದ್ದರು. ಆದರೆ, ಪಂಜರವನ್ನು ಬೆಂಬಲಿಸುವ ಕಬ್ಬಿಣದ ಸರಪಳಿಯ ಒಂದು ಬದಿಯು ಮುರಿದು, ಇಬ್ಬರೂ ವ್ಯಕ್ತಿಗಳು ಕೆಳಕ್ಕೆ ಬಿದ್ದಿದ್ದರು.
ವಿಸ್ಟೆಕ್ಸ್ ತನ್ನ ಸಿಬ್ಬಂದಿಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಸತಿ ವ್ಯವಸ್ಥೆ ಮಾಡಿದ್ದಲ್ಲದೆ, ಎರಡು ದಿನಗಳ ತನ್ನ ರಜತ ಮಹೋತ್ಸವ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. “ಶಾ ಮತ್ತು ರಾಜು ಅವರನ್ನು ಕಬ್ಬಿಣದ ಪಂಜರದ ಮೂಲಕ ವೇದಿಕೆ ಮೇಲೆ ಇಳಿಸಿ ಸಂಭ್ರಮಾಚರಣೆಗೆ ಚಾಲನೆ ನೀಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು,” ಎಂದು ಕಂಪನಿಯ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಘಟನೆಯಲ್ಲಿ ಸಂಜಯ್ ಷಾ ಅವರ ಕಾಲು ಮತ್ತು ಕೈಗೆ ಗಾಯಗಳಾಗಿದ್ದು, ವಿಶ್ವನಾಥ್ ರಾಜ್ ದತ್ಲಾ ಅವರ ತಲೆಗೆ ತೀವ್ರ ಗಾಯವಾಗಿದೆ. ಗಾಯಾಳುಗಳನ್ನು ಮ್ಯಾಕ್ಸಿ ಕ್ಯೂರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮಲಕಪೇಟೆಯ ಯಶೋದಾ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಸಂಜಯ್ ಶಾ ಸಾವನಪ್ಪಿದ್ದಾರೆ. ವಿಶ್ವನಾಥ್ ರಾಜ್ ದಾಟ್ಲಾ ಅವರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಸ್ಟೆಕ್ಸ್ ಏಷ್ಯಾದ ಕಾರ್ಯನಿರ್ವಾಹಕ ನಿರ್ದೇಶಕ ಜಾನಕಿರಾಮ್ ರಾಕು ಕಲಿದಿಂಡಿ ನೀಡಿದ ದೂರಿನ ಆಧಾರದ ಮೇಲೆ ರಾಮೋಜಿ ಫಿಲಿಮ್ ಸಿಟಿ ಈವೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಮನಮೋಹನ್ ತಿಳಿಸಿದ್ದಾರೆ.