Saturday, July 5, 2025
spot_imgspot_img
spot_imgspot_img

ಟ್ರಿಪ್ ಟು ಸ್ಪೇಸ್: ಬಾಹ್ಯಾಕಾಶಕ್ಕೆ ಹಾರಲಿದ್ದಾಳೆ ಗುಂಟೂರಿನ ಮಹಿಳೆ

- Advertisement -
- Advertisement -

ಭಾರತೀಯ ಮೂಲದ ಅಮೆರಿಕಾ ನಿವಾಸಿ ಸಿರಿಶಾ ಬಾಂಡ್ಲಾ ವರ್ಜಿನ್ ಗ್ಯಾಲಕ್ಟಿಕ್​ನ ಬಿಲಿಯನೇರ್ ಫೌಂಡರ್ ರಿಚರ್ಡ್ ಬ್ರಾನ್​ಸನ್ ಹಾಗೂ ಇತರೆ ನಾಲ್ವರ ಜೊತೆಯಲ್ಲಿ ಬಾಹ್ಯಾಕಾಶಕ್ಕೆ ಹಾರಲು ಹೊರಟಿದ್ದಾಳೆ.

ಜುಲೈ 11 ರಂದು ಅಮೆಜಾನ್ ಫೌಂಡರ್ ಜೆಫ್ ಬೆಜೋಸ್ ಅವರ ಟ್ರಿಪ್ ಟು ಸ್ಟೇಸ್ ಮಿಷನ್​ನಲ್ಲಿ ಆಂಧ್ರಪ್ರದೇಶ ಗುಂಟೂರಿನಲ್ಲಿ ಹುಟ್ಟಿ ಬೆಳೆದ ಸಿರಿಶಾ ಬಾಂಡ್ಲಾ ಕೂಡ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಕ್ಕೆ ಹಾರುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಯೂ ಸಹ ಸಿರಿಶಾ ಬಾಂಡ್ಲಾ ಅವರದ್ದಾಗಿದೆ. ಇನ್ನು ಬಾಹ್ಯಾಕಾಶಕ್ಕೆ ಹಾರಿದ ಭಾರತದ ನಾಲ್ಕನೇ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಸಿರಿಶಾ ಅವರದ್ದಾಗಲಿದೆ.

ಬಾಂಡ್ಲಾ ಈ ಟೀಮ್​ನಲ್ಲಿ ರಿಸರ್ಚರ್ ಎಕ್ಸ್​ಪೀರಿಯನ್ಸ್ ಆಗಿ ಕಾರ್ಯನಿರ್ವಸಹಿಸಲಿದ್ದಾರೆ. 34 ವರ್ಷದ ಸಿರಿಶಾ ಪುರ್ಡ್ಯೂ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ ಇಂಜಿನಿಯರ್ ಆಗಿ ಪದವಿ ಪಡೆದಿದ್ದಾರೆ. ಈ ಹಿಂದೆ ಭಾರತದ ರಾಕೇಶ್ ಶರ್ಮಾ, ಕಲ್ಪನಾ ಚಾವ್ಲಾ ಮತ್ತು ಸುನೀತ ಲೈನ್ ವಿಲಿಯಮ್ಸ್ ಕೂಡ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಸದ್ಯ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಲಿರೋ ಸಿರಿಶಾ ಅವರಿಗೆ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಶುಭ ಹಾರೈಸಿದ್ದಾರೆ.

ವಸಿರಿಶಾ ಬಾಂಡ್ಲಾ 2015ರಿಂದಲೂ ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸದ್ಯ ಈ ಸಂಸ್ಥೆಗೆ ಸರ್ಕಾರಿ ವ್ಯವಹಾರಗಳು ಮತ್ತು ಸಂಶೋಧನಾ ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಿರಿಶಾ ತಂದೆ ಮುರಳೀಧರ್ ಬಾಂಡ್ಲಾ ಕೃಷಿ ವಿಜ್ಞಾನಿಯಾಗಿದ್ದು ಹಲವು ವರ್ಷಗಳ ಹಿಂದೆ ಹೆಚ್ಚಿನ ಅವಕಾಶಗಳನ್ನ ಅರಸಿ ಯುನೈಟೆಡ್ ಸ್ಟೇಟ್ಸ್​ಗೆ ವಲಸೆ ತೆರಳಿದ್ದರು. ಇದೀಗ ಮುರಳೀಧರ್ ಬಾಂಡ್ಲಾ ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

- Advertisement -

Related news

error: Content is protected !!