Thursday, June 26, 2025
spot_imgspot_img
spot_imgspot_img

ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ : ಮಾಹಿತಿ ನೀಡಿದ ಸಚಿವ

- Advertisement -
- Advertisement -

ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ಭಾರೀ ಮಳೆಯಿಂದಾಗಿ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ಒಟ್ಟು ಹತ್ತು ಜನರು ಮೃತಪಟ್ಟಿದ್ದು, ಈ ಪೈಕಿ ಕಾರ್ಯಾಚರಣೆ ಮೂಲಕ ಈವರೆಗೆ ಎಂಟು ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಇನ್ನು ಈ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಈಗ ಗುಡ್ಡದ ಮುಂಭಾಗದಲ್ಲಿರುವ ಗಂಗಾವಳಿಯಲ್ಲಿರುವುದು ಪತ್ತೆಯಾಗಿದೆ. ದುರಂತ ಸಂಭವಿಸಿದ ಎಂಟು ದಿನಗಳು ಕಳೆದ ಬಳಿಕ ಟ್ರಕ್ ಪತ್ತೆಯಾಗಿದ್ದು, ಕಾರ್ಯಚರಣೆ ತೀವ್ರಗೊಂಡಿದೆ. ಸದ್ಯಕ್ಕೆ ನದಿಯಿಂದ ಟ್ರಕ್​ ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ.

ಇಂದು(ಬುಧವಾರ) ಗಂಗಾವಳಿ ನದಿಯಲ್ಲಿ ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಕಾರ್ಯಾಚರಣೆ ವೇಳೆ ಫೋಕ್ಲೇನ್ ಬಕೆಟ್​ಗೆ ಕಬ್ಬಿಣ ಬಡಿದಿದೆ. ಈ ಹಿನ್ನಲೆ ನದಿಯಲ್ಲಿ ವಾಹನ ಒಂದು ಇರುವುದು ಖಚಿತ ಆಗುತ್ತಿದ್ದಂತೆ, ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ನಾರಾಯಣ ಧಾವಿಸಿದ್ದಾರೆ. ಇದೀಗ ಕಾರ್ಯಾಚರಣೆ ತಿವ್ರಗೊಂಡಿದ್ದು, ಆ ವಾಹನ ಲಾರಿನಾ ಎಂಬ ಪ್ರಶ್ನೆ ಮೂಡುತ್ತಿದೆ.

- Advertisement -

Related news

error: Content is protected !!