Sunday, June 29, 2025
spot_imgspot_img
spot_imgspot_img

ಮಂಗಳೂರು: ಕರಾವಳಿ ಉತ್ಸವ ಮೈದಾನದಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ :ಪ್ರಥಮ ಬಾರಿಗೆ ಅಂತರ್ಜಲ ಸುರಂಗ ಮಾರ್ಗ ಮೀನುಗಳ ಪ್ರದರ್ಶನ

- Advertisement -
- Advertisement -

ಮಂಗಳೂರು : ದಕ್ಷಿಣ ಭಾರತದಾದ್ಯಂತ ಕಳೆದ ನಾಲ್ಕು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ ಎನ್‍ಸಿಎಫ್ ನಿಂದ ಸಂಘಟಿಸಲ್ಪಡುತ್ತಿರುವ ರಾಷ್ಟ್ರೀಯ ಗ್ರಾಹಕರ ಮೇಳ ಕರಾವಳಿ ಉತ್ಸವ ಮೈದಾನದಲ್ಲಿ ಸೆ.29ರಂದು ಉದ್ಘಾಟನೆಗೊಂಡಿದೆ

ಈ ಅಂತರ್ಜಲ ಸುರಂಗವು ಹಲವು ಪ್ರಭೇದದ ಮೀನುಗಳೊಂದಿಗೆ ಸುಂದರ ಮತ್ಸ್ಯ ಲೋಕವನ್ನು ಸೃಷ್ಟಿಸಿ ಮಂಗಳೂರಿನ ಜನತೆಗೆ ರಸದೌತಣವನ್ನು ನೀಡಲು ಸಜ್ಜಾಗಿದ್ದು, ಅಲ್ಲದೆ ರೊಬೊಟಿಕ್ ಅನಿಮಲ್ ಶೋದಲ್ಲಿ ದೈತ್ಯಾಕಾರದ ವನ್ಯಮೃಗಗಳು ಹಾಗೂ ಅವುಗಳ ಘರ್ಜನೆ ದಟ್ಟಾರಣ್ಯದಲ್ಲಿ ವಿಹರಿಸಿದ ಅನುಭವವನ್ನು ನೀಡಲಿದೆ.

ಮಂಗಳೂರಿಗೆ ಸ್ನೋವಲ್ಡ್, ಅಕ್ವಾ ಶೋ, ಬರ್ಡ್‍ಶೋ, ತಾಜ್‍ಮಹಲ್‍ನಂತಹ ವಿನೂತನ ರೀತಿಯ ಮೆಗಾ ಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಾ ಬಂದಿದೆ. ಈ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿ ಶಾಪಿಂಗ್ ಮತ್ತು ಮನರಂಜನಾ ಮೇಳವಾಗಿರುತ್ತದೆ.

ರಾಷ್ಟ್ರೀಯ ಗ್ರಾಹಕರ ಮೇಳವು ವ್ಯಾಪಾರ ಮಳಿಗೆಗಳೊಂದಿಗೆ, ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ಗೃಹ ಬಳಕೆ ಉತ್ಪನ್ನಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಲಿವೆ.
ರಾಷ್ಟ್ರೀಯ ಗ್ರಾಹಕರ ಮೇಳ ಕರಾವಳಿ ಉತ್ಸವ ಮೈದಾನದಲ್ಲಿ ಸಂಜೆ 4ರಿಂದ 9 ಗಂಟೆವರೆಗೆ ನಡೆಯಲಿದೆ.

- Advertisement -

Related news

error: Content is protected !!