Saturday, June 28, 2025
spot_imgspot_img
spot_imgspot_img

ಈಜು ಬಾರದೇ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ನೀರುಪಾಲು..!

- Advertisement -
- Advertisement -

ಮಂಡ್ಯ: ಈಜಲೆಂದು ಕೆರೆಗೆ ತೆರಳಿದ್ದ ಇಬ್ಬರು ಬಾಲಕರು ಈಜು ಬಾರದೇ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಬಾಲಕರನ್ನು ಶಂಕರಪುರ ಗ್ರಾಮದ ಸೋಮು (14) ಹಾಗೂ ಮುತ್ತುರಾಜು (17) ಎಂದು ಗುರುತಿಸಲಾಗಿದೆ.

ಕೆರೆಯಲ್ಲಿ ಈಜು ಹೊಡೆಯಲೆಂದು ಐವರು ಸ್ನೇಹಿತರು ಕೆರೆಗೆ ತೆರಳಿದ್ದರು. ಈ ವೇಳೆ ಈಜು ಬಾರದೇ ಸೋಮು ಹಾಗೂ ಮುತ್ತುರಾಜು ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೆರೆಯಲ್ಲಿ ಮುಳುಗಿದ ಇಬ್ಬರ ಪೈಕಿ ಮುತ್ತುರಾಜು ಮೃತದೇಹ ಪತ್ತೆಯಾಗಿದೆ.

ಸೋಮು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಭಾನುವಾರ ಸಂಜೆ ಘಟನೆ ನಡೆದಿದೆ. ಈ ಬಗ್ಗೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!