- Advertisement -
- Advertisement -



ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಸಮ್ ಗ್ರಾಮ ಪಂಚಾಯತ್ ಅಧಿಕಾರಿಗಳಿಬ್ಬರು ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಕೋಸಮ್ ಗ್ರಾಮ ಪಂಚಾಯತ್ ಪಿಡಿಒ ರಾಹುಲ್ ಹಾಗೂ ಜೆಇ ಸಿದ್ರಾಮೇಶ್ವರ್ ಎಂದು ತಿಳಿದು ಬಂದಿದೆ.
ಕೋಸಮ್ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕೆಲಸ ಮಾಡಿದ್ದ. ಗುತ್ತಿಗೆದಾರ ಅರವಿಂದ ಭಾಲ್ಕೆಯವರು 24 ಲಕ್ಷ ಬಿಲ್ ಪಾಸ್ ಮಾಡಲು ಪಿಡಿಓ ಬಳಿ ಕೇಳಿದ್ದರು. ಈ ವೇಳೆ ಜೆಇ ಹಾಗೂ ಪಿಡಿಓ ಬಿಲ್ ಪಾವತಿ ಮಾಡಬೇಕಾದರೆ 2.55 ಲಕ್ಷ ನೀಡುವಂತೆ ಕೇಳಿದ್ದರು.
ಈ ಹಿನ್ನಲೆ ಅರವಿಂದ್ ಭಾಲ್ಕೆಯವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು, ಈ ಹಿನ್ನೆಲೆಯಲ್ಲಿ ಬಸ್ ಸ್ಯಾಂಡ್ ಬಳಿ ಬಿಲ್ ಪಾವತಿ ಮಾಡಲು ಮುಂಗಡವಾಗಿ 1 ಲಕ್ಷ ಕಮಿಷನ್ ಪಡೆಯುತ್ತಿದ್ದ ವೇಳೆ ಡಿಎಸ್ಪಿ ಹನುಮಂತರಾಯ್ ಹಾಗೂ ಇನ್ಸ್ ಪೆಕ್ಟರ್ ಬಾಬಾಸಾಹೇಬ್ ಪಾಟೀಲ್ ನೇತೃತ್ವದ ಎರಡು ತಂಡಗಳು ದಾಳಿ ನಡೆಸಿ ಅಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
- Advertisement -