- Advertisement -
- Advertisement -





ಕುಂದಾಪುರ : ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ಬೀಜಾಡಿ ಬೀಚ್‌ನಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರಿನ ಹಾಸನಳ್ಳಿ ನಿವಾಸಿ ಅಜಯ್ ಮತ್ತು ಕುಂದಾಪುರ ತಾಲೂಕಿನ ಅಂಗಳ್ಳಿಯ ಸಂತೋಷ್ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಸಂತೋಷ್ ಬೆಂಗಳೂರಿನಿಂದ ಅಗಮಿಸಿದ್ದ ತನ್ನ ಸ್ನೇಹಿತ ಅಜಯ್‌ನನ್ನು ಕೋಡಿ ಬೀಚ್‌ಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದ. ಅಲೆಗಳ ಮಧ್ಯೆ ಆಟವಾಡುತ್ತಿದ್ದಾಗ ಬಲವಾದ ಪ್ರವಾಹಕ್ಕೆ ಇಬ್ಬರೂ ಕೊಚ್ಚಿಹೋದರು.
ಸ್ಥಳೀಯ ಮೀನುಗಾರರು ಮತ್ತು ಪರಿಣಿತ ಈಜುಗಾರರು ಶೋಧ ಕಾರ್ಯಾಚರಣೆಯ ವೇಳೆ ಮೊದಲು ಅಜಯ್ ಶವ ಪತ್ತೆಯಾಗಿದ್ದು, ನಂತರ ಸಂತೋಷ್ ಪತ್ತೆಯಾಗಿದ್ದಾನೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -