Sunday, June 29, 2025
spot_imgspot_img
spot_imgspot_img

ಕೊರೊನಾಗೆ ಇಬ್ಬರು ಬಲಿ – 74 ಪಾಸಿಟಿವ್‌, ಬೆಂಗಳೂರಿನಲ್ಲೇ 57 ಮಂದಿಗೆ ಸೋಂಕು

- Advertisement -
- Advertisement -

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 74 ಮಂದಿಗೆ ಕೊರೊನಾ ಪಾಸಿಟಿವ್‌ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡದ 51 ವರ್ಷ ಮತ್ತು ಮೈಸೂರಿನ 51 ವರ್ಷದ ವ್ಯಕ್ತಿಗಳು ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 6,403 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು 74 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ ಬೆಂಗಳೂರಿನಲ್ಲೇ 57 ಮಂದಿಗೆ ಸೋಂಕು ಬಂದಿದೆ.

ರಾಜ್ಯದಲ್ಲಿ ಒಟ್ಟು 464 ಸಕ್ರೀಯ ಕೇಸ್‌ಗಳಿದ್ದು, 423 ಮಂದಿ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದಾರೆ. 41 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 16 ಮಂದಿ ಐಸಿಯುನಲ್ಲಿದ್ದರೆ 25 ಮಂದಿ ಜನರಲ್‌ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಅತಿ ಹೆಚ್ಚು 32 ಸಕ್ರೀಯ ಪ್ರಕರಣ ದಾಖಲಾಗಿವೆ. ಶಿವಮೊಗ್ಗ 9, ದಕ್ಷಿಣ ಕನ್ನಡ 8, ಹಾಸನ 8, ಮಂಡ್ಯದಲ್ಲಿ 5 ಸಕ್ರೀಯ ಪ್ರಕರಣಗಳಿವೆ.

- Advertisement -

Related news

error: Content is protected !!