Saturday, June 6, 2026
spot_imgspot_img
spot_imgspot_img

ವಿಟ್ಲ: ದ್ವಿಚಕ್ರ ವಾಹನ ಸ್ಕಿಡ್ : ಸವಾರ ಮತ್ತು ಸಹ ಸವಾರನಿಗೆ ಗಾಯ

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ವಿಟ್ಲ: ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರ ಮತ್ತು ಸಹ ಸವಾರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ನಡೆದಿದೆ.

ಬಲ್ನಾಡು ಗ್ರಾಮ, ಬಂಟ್ವಾಳ ನಿವಾಸಿ ಎನ್‌ ಮಹಮ್ಮದ್‌ ಎಂಬವರ ದೂರಿನಂತೆ, ದಿನಾಂಕ:29-04-2024 ರಂದು ರಾತ್ರಿ ಸಮಯ, ದ್ವಿಚಕ್ರ ವಾಹನದಲ್ಲಿ (ಕೆಎ-21-ಇಇ-0132) ಮುಸ್ತಾಫ್ ಎಂಬವರು ಸಂಶುದ್ದೀನ್ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು, ಬೆಳಿಯೂರುಕಟ್ಟೆ –ಉಕ್ಕುಡ ರಸ್ತೆಯಲ್ಲಿ ಉಕ್ಕುಡ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದ್ದು, ದ್ವಿಚಕ್ರ ವಾಹನ ಸವಾರ ಮುಸ್ತಾಫ್ ರವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ ಸ್ಕಿಡ್ ಆಗಿ ಸವಾರ ಮತ್ತು ಸಹ ಸವಾರ ಬಿದ್ದಿರುತ್ತಾರೆ. ಪರಿಣಾಮ ಸಂಶುದ್ದೀನ್ ರವರಿಗೆ ಗಂಭೀರ ಗಾಯವಾಗಿದ್ದು, ಹಾಗೂ ಸವಾರ ಮುಸ್ತಾಫರವರಿಗೆ ಸಣ್ನ ಪುಟ್ಟ ಗಾಯಗಳಾಗಿರುತ್ತದೆ. ಗಾಯಾಳು ಸಂಶುದ್ದೀನ್ ರವರು ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ, ಅ.ಕ್ರ 80/2024 ಕಲಂ: 279,337 ಬಾಧಂಸಂ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!