- Advertisement -
- Advertisement -


ಬಂಟ್ವಾಳ : ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮ ಪೊಸಳಿ ಕುಲಾಲ ಭವನದ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಸ: ಚೋಳೂರು ಗ್ರಾಮ ನಿವಾಸಿ ಚಿನ್ನಯ್ಯ ಸಾಲಿಯಾನ್‌ರವರು ಆಗಸ್ಟ್ 11 ರಂದು ಬೆಳಿಗ್ಗೆ, ತನ್ನ KA 19 EF 3583 ನೇ ಮೋಟಾರು ಸ್ಕೂಟರ್ ವಾಹನವನ್ನು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮ ಪೊಸಳಿ ಕುಲಾಲ ಭವನದ ಬಳಿ ನಿಲ್ಲಿಸಿ, ಕಾರ್ಯಕ್ರಮವೊಂದಕ್ಕೆ ತೆರಳಿದವರು ಕೆಲವು ಗಂಟೆಗಳ ಬಳಿಕ ಹಿಂತಿರುಗಿ ಬಂದಾಗ ಮೋಟಾರು ಸ್ಕೂಟರ್ ಕಾಣೆಯಾಗಿದ್ದು, ಈ ಬಗ್ಗೆ ಸುತ್ತಮುತ್ತಲಿನ ಪರಿಸರದಲ್ಲಿ ವಿಚಾರಿಸಿದರೂ ಪ್ರಯೋಜನವಾಲಿಲ್ಲ, ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 137/2024 ಕಲಂ: (U/s-303(2) THE BHARATIYA NYAYA SANHITA (BNS), 2023 ರಂತೆ ಪ್ರಕರಣ ದಾಖಲಿಸಿದ್ದಾರೆ
- Advertisement -