- Advertisement -
- Advertisement -



ಕಳೆದ 24 ಗಂಟೆಗಳಲ್ಲಿ ಮಳೆಯ ಪ್ರಮಾಣದಲ್ಲಿ ಗಣನೀಯ ಇಳಿಮುಖ ಕಂಡು ಬಂದಿದ್ದರೂ, ಆಗಾಗ ಮಳೆಯೊಂದಿಗೆ ಬೀಸುವ ಗಾಳಿಗೆ ಜಿಲ್ಲೆಯಲ್ಲಿ ಮನೆಗಳಿಗೆ ಹಾಗೂ ಸೊತ್ತುಗಳಿಗೆ ಆಗುವ ಹಾನಿ ಹೆಚ್ಚುತ್ತಿದೆ.
ರವಿವಾರ ಬೀಸಿದ ಗಾಳಿಗೆ ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳಲ್ಲಿ ಅನೇಕ ತೋಟಗಾರಿಕಾ ಬೆಳೆಗಳಿಗೆ 3 ಹಾನಿಯುಂಟಾಗಿದ್ದರೆ, ಉಳಿದಂತೆ ಕನಿಷ್ಠ ಆರು ಮನೆಗಳಿಗೆ ಹಾನಿಯುಂಟಾಗಿದ್ದು 3.5 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ವರದಿಗಳು ಬಂದಿವೆ.ಕಾರ್ಕಳ ತಾಲೂಕು ಈದು ಗ್ರಾಮದ ದಿನೇಶ್ ಹಾಗೂ ಕುಂದಾಪುರ ತಾಲೂಕು ಸೇನಾಪುರದ ಶ್ರೀಧರ ಶೆಟ್ಟಿ ಎಂಬವರ ತೋಟಗಳಿಗೆ ಗಾಳಿಯಿಂದ ಅಪಾರ ಹಾನಿಯಾಗಿದೆ. ತೋಟದ ಅಡಿಕೆ ಮರಗಳು ಧರಾಶಾಯಿಯಾಗಿದ್ದು 50ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
- Advertisement -