Monday, August 10, 2026
spot_imgspot_img
spot_imgspot_img

ಸುಮಾರು 20 ಅಡಿ ಉದ್ದ ಹಾಗೂ 50 ಕೆ.ಜಿಯಷ್ಟು ಭಾರವಿರುವ ಬೃಹತ್ ಹೆಬ್ಬಾವು ರಕ್ಷಣೆ

- Advertisement -
- Advertisement -

ಉಡುಪಿ: ಉಡುಪಿ ಬೈಂದೂರಿನ ಗೋಳಿಹೊಳೆ ಎಂಬಲ್ಲಿ ಗ್ರಾಮದ ರವಿ ಶೆಟ್ಟಿ ಎಂಬವರ ಮನೆಯ ಬಳಿ ತೋಟದಲ್ಲಿ ಸುಮಾರು 20 ಅಡಿ ಉದ್ದ ಹಾಗೂ 50 ಕೆ.ಜಿಯಷ್ಟು ಭಾರವಿರುವ ಬೃಹತ್ ಹೆಬ್ಬಾವನ್ನು ರಕ್ಷಿಸಲಾಗಿದೆ.


ಮನೆಯ ತೋಟದಲ್ಲಿ ಭಾರೀ ಗಾತ್ರದ ಹೆಬ್ಬಾವು ನಾಯಿಯನ್ನು ಹಿಡಿದು ತಿನ್ನುತ್ತಿತ್ತು. ಇದನ್ನು ಕಂಡ ಮನೆಯ ಮಾಲಿಕ ಆ ನಾಯಿಯನ್ನು ಹಾವಿನಿಂದ ಬಿಡಿಸಿದ್ದಲ್ಲದೇ, ಹಾವಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಅದನ್ನು ಬಂಧಿಸಿದ್ದಾರೆ.

ನಂತರ ಗೋಳಿಹೊಳೆ ವಿಭಾಗಿಯ ಪ್ರಭಾರ ಅರಣ್ಯ ರಕ್ಷಕ ರ ಸಹಾಯದೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಹಾವನ್ನು ಬಿಟ್ಟು ಬಂದಿದ್ದಾರೆ.

- Advertisement -

Related news

error: Content is protected !!