Saturday, June 28, 2025
spot_imgspot_img
spot_imgspot_img

ಉಡುಪಿ: ಬಸ್‌ನಿಂದ ಆಯತಪ್ಪಿ ಬಿದ್ದ ಮಹಿಳೆ; ಪ್ರಾಣಾಪಾಯದಿಂದ ಪಾರು..!

- Advertisement -
- Advertisement -

ಉಡುಪಿ: ಸರಕಾರಿ ಬಸ್‌ನಿಂದ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆಯನ್ನು ಅದೇ ಬಸ್ಸಿನಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಸಮೀಪ ಪುತ್ತೂರು ಬಳಿಯ ಸರಕಾರಿ ಬಸ್‌‌ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದರು.

ಗಾಯಗೊಂಡ ಮಹಿಳೆಯನ್ನು ಉಡುಪಿ ಹನುಮಂತ ನಗರದ ನಿವಾಸಿ ಶಾಂತಾ (55) ಎಂದು ಗುರುತಿಸಲಾಗಿದೆ.

ವಿಷಯ ತಿಳಿದ ಸಾರ್ವಜನಿಕರು ಗಾಯಾಳು ಮಹಿಳೆಯನ್ನು ಅದೇ ಬಸ್‌‌‌ ಮೂಲಕ ಕರೆ ತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಮಹಿಳೆ ರಕ್ಷಣಾ ಸಮಯ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಆಕೆಯ ಬಲತೋಳಿನ ಮೂಳೆ ಸಂಪೂರ್ಣ ಮುರಿದಿತ್ತು ಎನ್ನಲಾಗಿದೆ.

ಸದ್ಯ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಗೆ ದಾಖಲಿಸಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಸಂಚಾರಿ ಠಾಣೆಗೆ ಹಾಗೂ ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.

- Advertisement -

Related news

error: Content is protected !!