- Advertisement -
- Advertisement -

ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ದಿಲೀಪ್ ಹೆಗ್ಡೆಗೆ ಏಪ್ರಿಲ್ 1ರಂದು ಹೈಕೋರ್ಟ್ ಜಾಮೀನು ಮಂಜೂರು ಗೊಳಿಸಿದೆ.
2024 ಅಕ್ಟೋಬರ್‌ನಲ್ಲಿ ಬಾಲಕೃಷ್ಣ ಪೂಜಾರಿಯನ್ನು (45), ಆಕೆಯ ಪತ್ನಿ ಪ್ರತಿಮಾಳೊಂದಿಗೆ (36) ಸೇರಿ, ದಿಲೀಪ್ (28) ಉಸಿರುಗಟ್ಟಿಸಿ ಕೊಲೆಗೈದಿದ್ದರು. ಪ್ರಾರಂಭದ ಹಂತದಲ್ಲಿ ಬಾಲಕೃಷ್ಣ ಅವರ ಸಾವು ಸಹಜ ಎಂಬಂತೆ ಬಿಂಬಿಸಲಾಯಿತಾದರೂ ಕುಟುಂಬದವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸ್ ವಿಚಾರಣೆ ಬಳಿಕ ಕೊಲೆ ಆರೋಪದ ಮೇರೆಗೆ ದಿಲೀಪ್ ಹಾಗೂ ಪ್ರತಿಮಾ ಅವರನ್ನು ಬಂಧಿಸಲಾಯಿತು. ಆರೋಪಿಗಳ ಪರ ವಕೀಲರು ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದು, ಸೆಸನ್ಸ್ ನ್ಯಾಯಾಲಯ ಬೇಲ್ ನಿರಾಕರಿಸಿತು. ಹೀಗಾಗಿ ದಿಲೀಪ್ ಪರ ವಕೀಲರು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ಎ. 1 ರಂದು ಜಾಮೀನು ನೀಡಿ ಆದೇಶಿಸಿದೆ. ದಿಲೀಪ್ ಪರ ನ್ಯಾಯಾವಾದಿ ನಿಶ್ಚಿತ್ ಕುಮಾರ್ ಶೆಟ್ಟಿ ವಾದ ಮಂಡಿಸಿದರು.
- Advertisement -