Sunday, June 29, 2025
spot_imgspot_img
spot_imgspot_img

ಉಡುಪಿ: ಜೇನುನೊಣಗಳ ದಾಳಿ; 40 ವಿದ್ಯಾರ್ಥಿಗಳಿಗೆ ಗಾಯ..!

- Advertisement -
- Advertisement -

ಉಡುಪಿ: ನಗರದ ವೊಳಕಾಡು ಶಾಲೆಯ ಆವರಣದಲ್ಲಿ ಜೇನುನೊಣಗಳ ದಾಳಿಯಿಂದ 40 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ. ಈ ಪೈಕಿ ಮೂವರು ಮಕ್ಕಳು ನಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದು, ಒಬ್ಬ ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 37 ವಿದ್ಯಾರ್ಥಿಗಳು ಹೊರರೋಗಿಗಳ ಆರೈಕೆಯನ್ನು ಪಡೆದು ಮನೆಗೆ ತೆರೆಳಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ ಮತ್ತು ಆತಂಕಕ್ಕೆ ಯಾವುದೇ ಕಾರಣವಿಲ್ಲ.

- Advertisement -

Related news

error: Content is protected !!