Tuesday, March 2, 2021

ಉಡುಪಿ: ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!

ಉಡುಪಿ: ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಕಟೀಲು ಸಮೀಪ ನಡೆದಿದೆ. ಮೃತರನ್ನು ಲಕ್ಷ್ಮೀಂದ್ರ ನಗರ ನಿವಾಸಿ ದಯಾನಂದ ನಾಯಕ್ ಎಂದು ಗುರುತಿಸಲಾಗಿದೆ.

ಇಂದು ಕಟೀಲು ಪ್ರದೇಶದಲ್ಲಿ ಕಾರೋಂದು ರಸ್ತೆ ಬದಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಕಾರಿನ ಬಳಿ ಹೋಗಿ ನೋಡಿದಾದ ದಯಾನಂದ ನಾಯಕ್ ಅವರು ಕಾರನಲ್ಲಿ ಮೃತಪಟ್ಟಿರುವುದು ತಿಳಿದು ಬಂದಿದೆ.

ಇವರು ವೃತ್ತಿಯಲ್ಲಿ ಕಾರು ಚಾಲಕರಾಗಿದ್ದು, ಫೆ.22 ರಂದು ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ವಾಪಾಸ್ಸು ಬರುತ್ತಿರುವಾಗ ಘಟನೆ ನಡೆದಿದೆ. ದಯಾನಂದ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಸ್ಥಳೀಯರು ಹೇಳಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!