Friday, June 27, 2025
spot_imgspot_img
spot_imgspot_img

ಉಡುಪಿ: ಮಾದಕ ವಸ್ತು ಸೇವನೆ; ಓರ್ವನ ಬಂಧನ..!

- Advertisement -
- Advertisement -

ಉಡುಪಿ: ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಓರ್ವನನ್ನು ಜುಲೈ 10ರಂದು ಉಡುಪಿಯಲ್ಲಿ ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಇಕ್ಬಾಲ್ ಶೇಕ್ (34) ಎಂದು ಗುರುತಿಸಲಾಗಿದೆ.

ಆರೋಪಿ ಇಕ್ಬಾಲ್ ಉಡುಪಿಯ ಕೊಳಂಬೆ ಮಿಷನ್ ಕಂಪೌಂಡ್ ನಿವಾಸಿ ಶಬೀರ್ ಅಹಮ್ಮದ್ ಎಂಬವರ ಪುತ್ರ. ಉಡುಪಿಯ ಶಿವಳ್ಳಿ ಗ್ರಾಮದ ಕಾಯಿನ್ ಸರ್ಕಲ್ ಬಳಿ ಜುಲೈ 10 ರಂದು ಕರ್ತವ್ಯದ ವೇಳೆ ಸಬ್ ಇನ್ಸ್‌ಪೆಕ್ಟರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಇಕ್ಬಾಲ್ ಪಾನಮತ್ತನಾಗಿದ್ದನ್ನು ಪತ್ತೆ ಹಚ್ಚಿದ್ದರು.

ಇಕ್ಬಾಲ್ ಡ್ರಗ್ಸ್ ಸೇವಿಸುತ್ತಿರುವ ಬಗ್ಗೆ ಅನುಮಾನಗೊಂಡ ಪೊಲೀಸ್ ಅಧಿಕಾರಿಗಳು ಆತನನ್ನು ಮಣಿಪಾಲ ಕೆಎಂಸಿ ಫೋರೆನ್ಸಿಕ್ ಮೆಡಿಸಿನ್ ವಿಭಾಗಕ್ಕೆ ಕರೆತಂದು ಪರೀಕ್ಷೆಗೆ ಒಳಪಡಿಸಿದ್ದರು. ಜುಲೈ 13ರಂದು ಆತ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿತ್ತು.ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!