Saturday, April 5, 2025
spot_imgspot_img
spot_imgspot_img

ಉಡುಪಿ- ಬ್ರಹ್ಮಾವರ ವಿದ್ಯಾಸಂಸ್ಥೆಗಳಲ್ಲಿ ಡಾ.ಧನಂಜಯ ಸರ್ಜಿ ಅವರಿಂದ ಮತಯಾಚನೆ

- Advertisement -
- Advertisement -

ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಉಡುಪಿಯಲ್ಲಿ ಮತಯಾಚನೆ ಮಾಡಿದ್ದಾರೆ. ಚುನಾವಣೆ ಹಿನ್ನಲೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪ್ರತಿಷ್ಠಿತ ಆಸ್ಪತ್ರೆ ಮಹೇಶ್ ಆಸ್ಪತ್ರೆ ಗೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅವರ ಜೊತೆಗೂಡಿ ಭೇಟಿ ನೀಡಿ ಹೆಸರಾಂತ ಮಕ್ಕಳ ತಜ್ಞ ಮತ್ತು ಮಹೇಶ್ ಆಸ್ಪತ್ರೆಯ ವೈದಕೀಯ ನೀರ್ದೇಶಕರಾದ ಡಾ ರಾಕೇಶ್ ಅಡಿಗ , ಆಡಳಿತ ವರ್ಗ , ಸಿಬ್ಬಂದಿ ವರ್ಗದವರಲ್ಲಿ ವಿಧಾನ ಪರಿಷತ್ ನ ನೈರುತ್ಯ ಪದವಿಧರರ ಚುನಾವಣೆಯಲ್ಲಿ ಗೆಲ್ಲಿಸಲು ನಮ್ಮನ್ನು ಬೆಂಬಲಿಸುವಂತೆ ಮತಯಾಚಿಸಿದರು

ಬ್ರಹ್ಮಾವರ ತಾಲೂಕಿನ ಮತ್ತೊಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಗೆ ಭೇಟಿ ನೀಡಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ಭೇಟಿ ನೀಡಿ , ಅಲ್ಲಿನ ಆಡಳಿತವರ್ಗ , ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರಲ್ಲಿ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮತಯಾಚಿಸಿದರು.

ಬಳಿಕ ಸೇಂಟ್ ಮೇರೀಸ್ ಸೈರನ್ ಪಿಯು ಕಾಲೇಜಿಗೆ ಭೇಟಿ ನೀಡಿ ಆಡಳಿತ ವರ್ಗ, ಸಿಬ್ಬಂದಿ ವರ್ಗದವರಲ್ಲಿ ವಿಧಾನ ಪರಿಷತ್ ನ ನೈರುತ್ಯ ಪದವಿಧರರ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಮತಯಾಚಿಸಿದರು .

ಈ ವೇಳೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ , ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ , ಕಾಲೇಜಿನ ಪ್ರಾಂಶುಪಾಲರಾದ ಡಾ ಮಂಜುನಾಥ್ ಉಡುಪ , ಡಾ ವಿದ್ಯಾಲತಾ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾಲೇಜಿನ ಆಡಳಿತ ವರ್ಗ , ಉಪನ್ಯಾಸ ವರ್ಗ, ಶಿಕ್ಷಕ ವರ್ಗ ಮತ್ತು ಪದವೀಧರ ಮತದಾರರು ಭಾಗವಹಿಸಿದ್ದರು.

- Advertisement -

Related news

error: Content is protected !!