Thursday, April 25, 2024
spot_imgspot_img
spot_imgspot_img

ಉಡುಪಿ ಸೈಂಟ್ ಮೇರಿಸ್ ಐಲ್ಯಾಂಡ್ ಪ್ರವಾಸಿಗರಿಗೆ ಮುಕ್ತ

- Advertisement -G L Acharya panikkar
- Advertisement -

ಉಡುಪಿ(ಅ.27):  ಉಡುಪಿಯ ಮಲ್ಪೆಯಿಂದ ಸುಮಾರು ಏಳು ಕಿಲೋ ಮೀಟರ್ ದೂರ, ಸಮುದ್ರ ಮಧ್ಯೆ ಇರೋ ಸೈಂಟ್ ಮೇರಿಸ್ ದ್ವೀಪ.ಜಿಲ್ಲೆಯಲ್ಲಿ ಹಲವು ಬೀಚ್‌ಗಳು ಪ್ರವಾಸಿಗರನ್ನು ಸೆಳೆಯುತ್ತೆ, ಆದ್ರೆ ಸಮುದ್ರದ ಮಧ್ಯೆ ದ್ವೀಪ ಅಂತಾ ಇರೋದು ಸೈಂಟ್ ಮೇರಿಸ್ ಮಾತ್ರ.

ದೂರದ ಊರುಗಳಿಂದ ಬರುವ ಪ್ರವಾಸಿಗರು ಸೈಂಟ್ ಮೇರಿಸ್ ಐಲ್ಯಾಂಡ್​​ಗೆ ಹೋಗೋದನ್ನು ಮಾತ್ರ ಮರೆಯಲ್ಲ. ಕೊರೊನಾ ಕಾರಣದಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗೋಕೆ ಇತ್ತೀಚಿನವರೆಗೂ ಅವಕಾಶ ಇರಲಿಲ್ಲ. ಆದರೆ ಜಿಲ್ಲಾಡಳಿತ ಅವಕಾಶ ನೀಡಿದ್ದು ಬೋಟ್‌ನವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದ್ವೀಪಕ್ಕೆ ಕರೆದುಕೊಂಡು ಹೋಗ್ತಿದ್ದಾರೆ.

ಸ್ಥಳೀಯ ಪ್ರವಾಸಿಗರು ಅಲ್ಲದೇ ದೂರದ ಊರುಗಳಿಂದ ಬರುವ ಪ್ರವಾಸಿಗರು ಬೋಟ್ ಪ್ರಯಾಣ, ದ್ವೀಪದ ಸೌಂದರ್ಯ ಕಂಡು ಖುಷಿ ಪಡುತ್ತಿದ್ದಾರೆ. ವಿವಿಧ ಆಕೃತಿಯ ಕಲ್ಲು ಬಂಡೆಗಳು, ತಂಪಾದ ಗಾಳಿ, ಅಲೆಗಳ ಅಬ್ಬರ ನೋಡಿ ಸಂತಸ ಪಡುತ್ತಿದ್ದಾರೆ. ಐಲ್ಯಾಂಡ್‌ ಬೀಚ್‌ ಅಲೆಗಳ ಜೊತೆ ಆಡುತ್ತಾ ಈಜಾಡುತ್ತಾ, ಪೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡ್ತಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನ ಉಡುಪಿಗೆ ಬರುವ ಪ್ರವಾಸಿಗರು ಐಲ್ಯಾಂಡ್‌‌ಗೆ ತೆರಳಲು ಅವಕಾಶ ಇಲ್ಲದೇ ನಿರಾಸೆಗೊಳ್ಳುತ್ತಿದ್ದರೂ. ಆದರೆ ಈಗ ಜಿಲ್ಲಾಡಳಿತ ಅವಕಾಶ ನೀಡಿದ್ದು. ಸಮುದ್ರದ ಸ್ವಚ್ಛತೆ ಕಾಪಾಡಿ ಸರ್ಕಾರದ ನಿಯಮಗಳನ್ನು ಪಾಲಿಸುವುದು ಕೂಡ ಪ್ರವಾಸಿಗರ ಜವಾಬ್ದಾರಿ ಆಗಿದೆ.

- Advertisement -

Related news

error: Content is protected !!