Saturday, April 20, 2024
spot_imgspot_img
spot_imgspot_img

ಐಸಿಸ್ ಉಗ್ರ ಅರೆಸ್ಟ್:ದೆಹಲಿಯಲ್ಲಿ ಹೈ ಅಲರ್ಟ್

- Advertisement -G L Acharya panikkar
- Advertisement -

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಐಸಿಸ್ ಉಗ್ರನನ್ನು ವಿಶೇಷ ಪೊಲೀಸ್ ಸೆಲ್ ಅಧಿಕಾರಿಗಳು ಬಂಧಿಸಿದ್ದಾರೆ. ಶುಕ್ರವಾರ ತಡರಾತ್ರಿ ದೌಲಾಕೋನ್ ಏರಿಯಾದಲ್ಲಿ ಉಗ್ರ ಹಾಗೂ ಪೊಲೀಸರು ನಡುವೆ ಗುಂಡಿನ ಚಕಮಕಿ ನಡೆಯಿತು. ಬಳಿಕ ಉಗ್ರರನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಇನ್ನು ಉಗ್ರನ ಬಳಿಯಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಳ್ಳಳಾಗಿದೆ. 2 ಐಇಡಿ ಹಾಗೂ ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಳ್ಳಳಾಗಿದೆ ಎಂದು ಪೊಲೀಸ್ ಸ್ಪೆಷಲ್ ಸೆಲ್ ನ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾಹಾ ತಿಳಿಸಿದ್ದಾರೆ.

ದೆಹಲಿಯಲ್ಲಿ ಎನ್ ಎಸ್ ಜಿ ಕಮಾಂಡುಗಳ ನಿಯೋಜನೆ:

ಐಸಿಸ್ ಉಗ್ರನನ್ನು ಸೆರೆಹಿಡಿದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಎನ್ ಎಸ್ ಜಿ ಕಮಾಂಡುಗಳ ನಿಯೋಜನೆ ಮಾಡಲಾಗಿದೆ. ರಿಡ್ಜ್ ರಸ್ತೆಯ ಬುದ್ಧ ಜಯಂತಿ ಪಾರ್ಕ್ ಬಳಿ ನಿಯೋಜಿಸಲಾಗಿದೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯ ದಳವನ್ನು ದಳ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ.

- Advertisement -

Related news

error: Content is protected !!