- Advertisement -
- Advertisement -





ಉಳ್ಳಾಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಸ್ಥಾನ ಬಳಿ ನಡೆದಿದೆ.
ಇರಿತಕ್ಕೊಳಗಾದ ಯುವಕ ಕಿನ್ಯ ನಿವಾಸಿ ಮನೋಜ್ ಆಚಾರ್ಯ (31) ಹಾಗೂ ಚೂರಿಯಿಂದ ಇರಿದ ಆರೋಪಿ ಶರತ್ ಎಂದು ಗುರುತಿಸಲಾಗಿದೆ.
ಮನೋಜ್ ಮತ್ತು ಶರತ್ ಗೆ ಕುಟುಂಬ ಹಾಗೂ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶರತ್ ಮನೋಜ್ ಆಚಾರ್ಯ ಎಂಬಾತನನ್ನು ಆಗಾಗ ತಗಾದೆ ಎತ್ತುತ್ತಿದ್ದ. ರವಿವಾರ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮನೋಜ್ ಗೆ ಶರತ್ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಈ ಬಗ್ಗೆ ಮನೋಜ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -