Saturday, June 28, 2025
spot_imgspot_img
spot_imgspot_img

ಉಳ್ಳಾಲ: ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ; ಮೂವರ ಬಂಧನ..!

- Advertisement -
- Advertisement -

ಉಳ್ಳಾಲ: ಇಸ್ಪೀಟ್ ಆಟ ಆಡುತ್ತಿದ್ದ ಮೂವರನ್ನು ಕೊಣಾಜೆ ಪೊಲೀಸರು ಬಂಧಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ನಡೆದಿದೆ.

ಬಂಧಿತರನ್ಮು ಅಂಬ್ಲಮೊಗರು ಗ್ರಾಮದ ಗಟ್ಟಿಕುದ್ರು ನಿವಾಸಿ ಅನಿಲ್ ಡಿಸೋಜಾ (45), ಉಳ್ಳಾಲ ಕೋಡಿ ಡೌನ್ ರಸ್ತೆ ನಿವಾಸಿ ಹನೀಫ್ ಮುಹಮ್ಮದ್ (32), ಜಪ್ಪಿನಮೊಗರು ನಿವಾಸಿ ಮುಹಮ್ಮದ್ ನಾಜೀಮ್ (20) ಎಂದು ಗುರುತಿಸಲಾಗಿದೆ.

ಬಂಧಿತರಿಂದ ನಗದು, ಸ್ಕೂಟರ್, ಸ್ಮಾರ್ಟ್ ಫೋನ್ ಸೇರಿದಂತೆ ಇಸ್ಪೀಟ್ ಆಟಕ್ಕೆ ಬಳಸಿದ ಎಲೆಗಳು ಸೇರಿದಂತೆ ಒಟ್ಟು 63,750 ರೂಗಳ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!