Sunday, June 29, 2025
spot_imgspot_img
spot_imgspot_img

ಉಳ್ಳಾಲ: ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ನೀರು ಪಾಲಾಗುತ್ತಿದ್ದ ಯುವಕನ ರಕ್ಷಣೆ

- Advertisement -
- Advertisement -

ಉಳ್ಳಾಲ: ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ನೀರು ಪಾಲಾಗುತ್ತಿದ್ದ ಓರ್ವನನ್ನು ಸ್ಥಳೀಯ ಶಿವಾಜಿ ಜೀವರಕ್ಷಕ ದಳದ ಸದಸ್ಯರು ರಕ್ಷಿಸಿದ ಘಟನೆ ಉಳ್ಳಾಲ ಬೀಚ್‌ನಲ್ಲಿ ನಡೆದಿದೆ.

ಬೆಂಗಳೂರಿನ ಯಶವಂತಪುರ ನಿವಾಸಿ ನಿಝಾಮ್ (35) ಎಂಬಾತನನ್ನು ರಕ್ಷಿಸಲಾಗಿದೆ. ಮೊಗವೀರಪಟ್ಟದ ಶಿವಾಜಿ ಜೀವರಕ್ಷಕ ದಳದ ವಿಕ್ರಮ್‌ ಪುತ್ರನ್, ಶ್ರವಣ್, ದೀಕ್ಷಿತ್ ಬಂಗೇರ, ದೀಕ್ಷಿತ್ ಚಂದನ್, ನಿಶಾಂತ್, ರಕ್ಷಿತ್ ಬಂಗೇರ, ರವಿ ಕಾಂಚನ್ ಸೇರಿ ನಿಝಾಮನ್ನು ರಕ್ಷಿಸಿದ್ದಾರೆ.

ಬಕ್ರೀದ್ ಹಬ್ಬದ ರಜೆಯ ನಿಮಿತ್ತ ಬೆಂಗಳೂರಿನಿಂದ ಮೂವರು ಸ್ನೇಹಿತರು ದರ್ಗಾ ದರ್ಶನಕ್ಕೆಂದು ಬಂದಿದ್ದರು. ಅಲ್ಲಿಂದ ಮೂವರು ಉಳ್ಳಾಲ ಬೀಚ್ ನಲ್ಲಿ ಸಮುದ್ರ ವಿಹಾರಕ್ಕೆಂದು ಬಂದಿದ್ದರು. ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಿದ್ದು, ಸಮುದ್ರ ತೀರದಲ್ಲಿ ನೀರಾಟವಾಡುತ್ತಿದ್ದ ಮೂವರ ಪೈಕಿ ನಿಝಾಮ್ ಅಲೆಗಳ ನಡುವೆ ಸಿಲುಕಿ ಸಮುದ್ರಪಾಲಾಗಿದ್ದ. ತಕ್ಷಣ ಸ್ಥಳದಲ್ಲಿದ್ದ ಶಿವಾಜಿ ಜೀವರಕ್ಷಕ ತಂಡದ ಸದಸ್ಯರು ಗಮನಿಸಿ ಭಾರೀ ಗಾತ್ರದ ಅಲೆಗಳ ನಡುವೆ ಈಜಿಕೊಂಡು ನಿಝಾಂನನ್ನು ರಕ್ಷಿಸಿದ್ದಾರೆ. ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!