Thursday, May 2, 2024
spot_imgspot_img
spot_imgspot_img

ಉಳ್ಳಾಲ: ಯುವತಿಗೆ ಲೈಂಗಿಕ ಕಿರುಕುಳ, ಹಲ್ಲೆ – ದೂರು ದಾಖಲು

- Advertisement -G L Acharya panikkar
- Advertisement -

ಉಳ್ಳಾಲ: ಯುವತಿಯೊಬ್ಬಳಿಗೆ ಅಪರಿಚಿತ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ಈ ಕುರಿತು ಸಂತ್ರಸ್ತೆ ‌ಯುವತಿ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆ ‌ಯುವತಿ ‌ತನ್ನ ನಿವಾಸದಿಂದ ಭಗವತಿ ದೇವಸ್ಥಾನದ ಒಳರಸ್ತೆಯಾಗಿ ರಾತ್ರಿ 7.30ರ ವೇಳೆ ನಡೆದುಕೊಂಡು ಬರುತ್ತಿದ್ದಾಗ ಅಪರಿಚಿತ ವ್ಯಕ್ತಿ ಈ ಬಳಿ ಬಂದು ಮೈಮೇಲೆ ಕೈ ಹಾಕಿದ್ದಾನೆ. ಈ ವೇಳೆ ಮಹಿಳೆ ಕಿರುಚಿದ್ದು, ಇದರಿಂದ ಮಹಿಳೆಗೆ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಂತ್ರಸ್ತೆ ‌ಯುವತಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!