Saturday, June 28, 2025
spot_imgspot_img
spot_imgspot_img

ಉಳ್ಳಾಲ: ಒಣಗಲು ಹಾಕಿದ್ದ ಮಹಿಳೆಯರ ಸಲ್ವಾರ್, ಒಳ ಉಡುಪು ಕಳವು..! ಬಾಗಿಲಿನ ಲಾಕರ್‌ಗೆ ಕಾಂಡೋಮ್ ಸಿಕ್ಕಿಸಿ ವಿಕೃತಿ

- Advertisement -
- Advertisement -

ಉಳ್ಳಾಲ: ಒಣಗಲು ಹಾಕಿದ್ದ ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಒಳ ಉಡುಪುಗಳನ್ನು ಕದ್ದೊಯ್ದಿದ್ದು ಮಾತ್ರವಲ್ಲದೆ ಮನೆ ಬಾಗಿಲ ಲಾಕರ್‌ಗೆ ಕಾಂಡೋಮ್ ಸಿಕ್ಕಿಸಿ ವಿಕೃತಿ ಮೆರೆದ ಘಟನೆ ನಡೆದಿದೆ. ಉಳ್ಳಾಲ ಬೈಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಉಳ್ಳಾಲ ಬೈಲಿನ ಸುಂದರ್ ಎನ್ನುವವರ ಮನೆ ಮೇಲಿರುವ ಬಾಡಿಗೆ ನಿವಾಸಿಗಳ ಬೆಲೆ ಬಾಳುವ ಬಟ್ಟೆಗಳನ್ನ ವಿಕೃತರು ಕಳವುಗೈದಿದ್ದಾರೆ.

ಬಾಡಿಗೆ ಮನೆಯ ಮಹಿಳೆ ಮತ್ತು ಆಕೆಯ ಮಗಳ ಬೆಲೆ ಬಾಳುವ ಸಲ್ವಾರ್, ಮತ್ತು ಒಳ ಉಡುಪುಗಳನ್ನ ಬಾಲ್ಕನಿ ಮತ್ತು ಟೆರೇಸ್ ಮೇಲೆ ನಿನ್ನೆ ಸಂಜೆ ಒಣ ಹಾಕಲಾಗಿತ್ತು. ಇಂದು ಬೆಳಗ್ಗೆ ಬಾಡಿಗೆ ಮನೆ ಯಜಮಾನ ಎದ್ದಾಗ ಮುಖ್ಯ ಬಾಗಿಲಿನ ಲಾಕರ್ ಗೆ ಕಾಂಡೋಮ್‌ ಅನ್ನು ಸಿಕ್ಕಿಸಿರುವುದು ಬೆಳಕಿಗೆ ಬಂದಿದೆ. ಸ್ವಲ್ಪ ಹೊತ್ತಲ್ಲಿ ಒಣ ಹಾಕಲಾಗಿದ್ದ ಮಹಿಳೆಯರ ಉಡುಪುಗಳು ಕಳವಾಗಿದ್ದು ತಿಳಿದಿದೆ. ವಿಶೇಷವೆಂದರೆ ಬಾಡಿಗೆ ಯಜಮಾನನ ಬೆಲೆ ಬಾಳುವ ಶರ್ಟ್, ಟಿ ಶರ್ಟ್, ಪ್ಯಾಂಟ್ ಗಳನ್ನ ಬಿಟ್ಟು ಹೋಗಿದ್ದಾರೆ. ಪಕ್ಕದ ಮನೆಯಿಂದಲೂ ಮಹಿಳೆಯರ ಉಡುಪು, ಒಳ ಉಡುಪುಗಳನ್ನ ಕದ್ದೊಯ್ಯಲಾಗಿದೆ.

ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುವ ಕುಟುಂಬದ ಸುಮಾರು 7 ಸಾವಿರ ಮೌಲ್ಯದ ಉಡುಪನ್ನ ಕಳವುಗೈಯಲಾಗಿದೆ. ಮೇಲ್ನೋಟಕ್ಕೆ ಯಾರೋ ವಿಕೃತ ಕಾಮಿಗಳೇ ಈ ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ.

- Advertisement -

Related news

error: Content is protected !!