Wednesday, April 24, 2024
spot_imgspot_img
spot_imgspot_img

ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿಗೆ ಕೊರೊನಾ ಪಾಸಿಟಿವ್:

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ವೈರಸ್​ ಕ್ಷಣಕ್ಷಣಕ್ಕೂ ಆತಂಕ, ತಲ್ಲಣವನ್ನು ಸೃಷ್ಟಿಸುತ್ತಲೇ ಸಾಗಿದೆ. ಇದೀಗ ಬಿಜೆಪಿ ನಾಯಕಿ ಉಮಾ ಭಾರತಿ ಅವರ ಸರದಿ. ನಿನ್ನೆ ತಡರಾತ್ರಿ ಟ್ವಿಟರ್​ ಮೂಲಕ ಮಾಹಿತಿ ನೀಡಿರುವ ಉಮಾ ಭಾರತಿ, ತಮಗೆ ಕೊರೊನಾ ಪಾಸಿಟಿವ್​ ಬಂದಿರುವುದಾಗಿ ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ಅವರು ಅಲ್ಪ ಜ್ವರದಿಂದ ಬಳಲುತ್ತಿದ್ದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಕೊರೊನಾ ಪಾಸಿಟಿವ್​ ಎಂಬ ವರದಿ ಬಂದಿದೆ ಎಂದಿರುವ ಉಮಾ ಭಾರತಿ, ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಪ್ರವಾಸದಲ್ಲಿ ಇದ್ದೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಂಡಿದ್ದೆ. ಆದರೂ ಕೊರೊನಾ ಪಾಸಿಟಿವ್​ ಎಂಬ ವರದಿ ಬಂದಿದೆ ಎಂದಿದ್ದಾರೆ.ನಾಲ್ಕು ದಿನಗಳ ನಂತರ ಮತ್ತೊಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ಒಂದು ವೇಳೆ ಪರಿಸ್ಥಿತಿ ಹಾಗೇ ಇದ್ದರೆ ವೈದ್ಯರನ್ನು ಸಂಪರ್ಕಿಸುತ್ತೇನೆ ಎಂದು ಉಮಾ ಭಾರತಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!