




ಮಣಿಪುರ ಬಿರ್ ಟಿಕೇಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಪ್ರದೇಶದಲ್ಲಿ ಅಪರಿಚಿತ ಡ್ರೋನ್‍ಗಳು ಹಾರಾಟ ನಡೆಸಿದ್ದು, ವಿಮಾನ ಹಾರಾಟದ ಕಾರ್ಯಾಚರಣೆಯನ್ನು ರದ್ದು ಪಡೆಸಲಾಗಿದೆ. ಈ ಘಟನೆಯಿಂದ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಆತಂಕ ಶುರುವಾಗಿದೆ.
ಕೆಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. ಇನ್ನೂ ಕೆಲವು ವಿಮಾನಗಳನ್ನು ಮಾರ್ಗ ಮಧ್ಯದಿಂದಲೇ ಬೇರೆಡೆಗೆ ತಿರುಗಿಸಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿಮಾನ ನಿಲ್ದಾಣದ ನಿರ್ದೇಶಕ ಚಿಪೆಮ್ಮಿ ಕೀಶಿಂಗ್, ಇಂಫಾಲ್ ನಿಯಂತ್ರಿತ ವಾಯುಪ್ರದೇಶದಲ್ಲಿ ಅಪರಿಚಿತ ಹಾರುವ ವಸ್ತುವೊಂದು ಕಂಡುಬಂದ ಕಾರಣ, ಎರಡು ವಿಮಾನಗಳನ್ನು ತಿರುಗಿಸಲಾಗಿದೆ ಮತ್ತು ಮೂರು ಹೊರಡುವ ವಿಮಾನಗಳು ವಿಳಂಬವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪ್ರತಿಕೂಲವಾದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿತ್ತು. ಬಳಿಕ ನಿಷೇಧವನ್ನು ನ.23ರ ವರೆಗೆ ವಿಸ್ತರಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.