Monday, June 30, 2025
spot_imgspot_img
spot_imgspot_img

ಉಪ್ಪಿನಂಗಡಿ: ಪಿಕಪ್ – ದ್ವಿಚಕ್ರ ವಾಹನ ಅಪಘಾತ..! ಓರ್ವ ಮೃತ್ಯು

- Advertisement -
- Advertisement -

ಉಪ್ಪಿನಂಗಡಿ: ಪಿಕಪ್ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ಸವಾರ ಮೃತ ಪಟ್ಟು ಸಹಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಬನಾರಿ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಶುಂಠಿಪಲಿಕೆ ನಿವಾಸಿ ಅಬ್ಬೂಬ್ಬಕರ್ ಅಪಘಾತದಲ್ಲಿ ಮೃತಪಟ್ಟವರು. ಅವರ ಪತ್ನಿ ಬಿಪಾತುಮ್ಮ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಬ್ಬೂಬ್ಬಕರ್ ಅವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸಂಚಾರ ಠಾಣೆಯ ಪೊಲೀಸರು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!