

ಕರಿಮೆಣಸು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದ್ದು, ಅದನ್ನು ಅನೇಕ ರೋಗಗಳು ಮತ್ತು ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
ಕರಿಮೆಣಸು ಅಡುಗೆಗೆ ಉತ್ತಮ ರುಚಿ ನೀಡುವುದಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಕರಿಮೆಣಸು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದ್ದು, ಅದನ್ನು ಅನೇಕ ರೋಗಗಳು ಮತ್ತು ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಕರಿಮೆಣಸು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೂರ ಮಾಡುತ್ತದೆ.
ವಿಶೇಷವಾಗಿ ಪ್ರತಿದಿನ ನಾಲ್ಕು ಕರಿಮೆಣಸಿನಕಾಯಿಗಳನ್ನು ಅಗಿದು ನುಂಗುವುದರಿಂದ ಅಧಿಕ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು.ಇನ್ನು ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರಿಗೆ ಕರಿಮೆಣಸು, ಪುದೀನಾವನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿನ ಕಲ್ಮಶಗಳ ಜತೆಗೆ ಕೊಬ್ಬು ಕರಗುತ್ತದೆ. ಇದು ಅಧಿಕ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಶೀತ ಮತ್ತು ಕೆಮ್ಮಿನಿಂದ ಬಳಲುವವರು ಕರಿಮೆಣಸಿನ ಕಷಾಯ ಮಾಡಿ ಕುಡಿಯುವುದು ಸೂಕ್ತ. ಇದು ಗಂಟಲು ನೋವನ್ನು ಕೂಡ ದೂರ ಮಾಡುತ್ತದೆ. ಕರಿಮೆಣಸು, ಶುಂಠಿ ರಸ, ತುಳಸಿ ಎಲೆಗಳು, ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಚಹಾದಂತೆ ಮಾಡಿ ಕುಡಿಯಿರಿ ಇದು ಕೆಮ್ಮು ದೂರ ಮಾಡುತ್ತದೆ