Saturday, May 11, 2024
spot_imgspot_img
spot_imgspot_img

ದ್ರಾಕ್ಷಿ ಹಣ್ಣಿನ ಪ್ರಯೋಜನಗಳು

- Advertisement -G L Acharya panikkar
- Advertisement -

ಬೇಸಿಗೆ ಬಂತೆಂದರೆ ಮಾರುಕಟ್ಟೆಗೆ ದ್ರಾಕ್ಷಿ ಲಗ್ಗೆ ಇಟ್ಟು ಬಿಡುತ್ತವೆ. ದ್ರಾಕ್ಷಿಗಳು ಎರಡು ಮೂರು ಬಣ್ಣಗಳಲ್ಲಿ ಬರುತ್ತವೆ. ಕಪ್ಪು, ಕೆಂಪು ಮತ್ತು ಹಸಿರು. ಜನರು ಬೇಸಿಗೆಯಲ್ಲಿ ಹೆಚ್ಚಾಗಿ ದ್ರಾಕ್ಷಿಯನ್ನು ತಿನ್ನಲು ಇಷ್ಟಪಡುತ್ತಾರೆ. ಈ ಹಣ್ಣನ್ನು ತಿನ್ನಬೇಕಾದರೆ ಸಿಪ್ಪೆ ತೆಗೆಯುವ ಅಥವಾ ಕತ್ತರಿಸುವ ತೊಂದರೆ ಇರುವುದಿಲ್ಲ. ಮಾರುಕಟ್ಟೆಯಿಂದ ತಂದು ಹಾಗೆಯೇ ತೊಳೆದು ತಿನ್ನಬಹುದು. ಬೇಸಿಗೆಯಲ್ಲಿ ದ್ರಾಕ್ಷಿ ತಿನ್ನುವುದರಿಂದ ಬಾಯಿ ರುಚಿಯ ಜೊತೆಗೆ ಆರೋಗ್ಯ ವೃದ್ದಿಯೂ ಆಗುವುದು. ಈ ಹಣ್ಣಿನ ವಿಶೇಷವೆಂದರೆ ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಫಾಸ್ಫರಸ್ ಫೋಲೇಟ್, ಸೆಲೆನಿಯಂ ಮುಂತಾದ ಪೋಷಕಾಂಶಗಳಿವೆ. ಇದರಲ್ಲಿರುವ ಈ ಎಲ್ಲಾ ಅಂಶಗಳು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.

ದ್ರಾಕ್ಷಿಯಲ್ಲಿ ಫೈಬರ್ ಅಂಶ ಕೂಡಾ ಅಧಿಕವಾಗಿದೆ. ಇದು ಉತ್ತಮ ಜೀರ್ಣಕಾರಿ ಆರೋಗ್ಯಕ್ಕೆ ಅವಶ್ಯಕವಾಗಿದೆ. ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ. ದ್ರಾಕ್ಷಿ ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇವುಗಳಲ್ಲಿ ಪಾಲಿಫಿನಾಲ್ ಗಳು ಅಡಗಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದ್ರಾಕ್ಷಿಯನ್ನು ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.

ದ್ರಾಕ್ಷಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಬಿಳಿ ರಕ್ತ ಕಣಗಳ ರಚನೆಯನ್ನು ಹೆಚ್ಚಿಸುತ್ತದೆ. ಸೋಂಕುಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತವೆ. ಇದರೊಂದಿಗೆ, ದ್ರಾಕ್ಷಿ ಚರ್ಮದ ಆರೋಗ್ಯಕ್ಕೂ ಸಹಕಾರಿ.

ಬಹುತೇಕ ಜನರು ದ್ರಾಕ್ಷಿಯನ್ನು ತಿನ್ನುವ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಬೆಳಿಗ್ಗೆ ಅಥವಾ ಮಧ್ಯಾಹ್ನ ದ್ರಾಕ್ಷಿಯನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ. ಆದರೆ ದ್ರಾಕ್ಷಿಯನ್ನು ಬೆಳಿಗ್ಗೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ವಾಸ್ತವವಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿಯನ್ನು ತಿನ್ನುವುದರಿಂದ ಗ್ಯಾಸ್, ಹುಳಿ ತೇಗು ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು.

- Advertisement -

Related news

error: Content is protected !!