



ನಿಂಬೆ ಹಣ್ಣಿನಲ್ಲಿ ಭರ್ಜರಿಯಾಗಿ ವಿಟಮಿನ್ ಸಿ ಸಿಗುತ್ತದೆ. ವಿಟಮಿನ್ ಸಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಂಬೆ ರಸದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಇದು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ. ಪ್ರತಿದಿನ ಒಂದು ಲೋಟ ನಿಂಬೆ ಪಾನಕವನ್ನು ಕುಡಿದರೆ, ಅನೇಕ ರೋಗಗಳನ್ನು ತೊಡೆದುಹಾಕಬಹುದು.
ನಿಂಬೆ ರಸ ಶರೀರವನ್ನು ಡಿಟಾಕ್ಸ್ ಮಾಡುತ್ತದೆ. ಅಂದರೆ, ದೇಹದ ವಿಷಕಾರಕಗಳನ್ನು ಹೊರಗೆ ಹಾಕಲು ನೆರವಾಗುತ್ತದೆ. ದಿನವೂ ನಿಂಬೆ ಶರಬತ್ತು ಕುಡಿಯುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಹೊಟ್ಟೆಯ ರೋಗಗಳು ಗುಣವಾಗುತ್ತದೆ.
ಮನುಷ್ಯನ ಮೂತ್ರ ಪಿಂಡಗಳಲ್ಲಿ ಅಥವಾ ಕಿಡ್ನಿಗಳಲ್ಲಿ ಕಂಡು ಬರುವ ಕಲ್ಲುಗಳು ಹೆಚ್ಚಾಗಿ ಕ್ಯಾಲ್ಸಿಯಂ ಅಂಶದ ಶೇಖರಣೆಯಿಂದ ಉಂಟಾಗುವ ಘನ ವಸ್ತುಗಳು ಎನಿಸುತ್ತವೆ. ಮನುಷ್ಯನ ದೇಹದಲ್ಲಿ ಉಂಟಾಗುವ ಇಂತಹ ಆರೋಗ್ಯ ಸಮಸ್ಯೆಗಳಿಗೆ ಆಮ್ಲಿಯ ಪದಾರ್ಥಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ ಎಂದು ಹೇಳುತ್ತಾರೆ. ನಿಂಬೆ ಹಣ್ಣಿನಲ್ಲಿ ” ಸಿಟ್ರಿಕ್ ಆಸಿಡ್ ” ಎಂಬ ಆಮ್ಲವಿರುವುದರಿಂದ, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಅರ್ಧ ಲೋಟ ಲೆಮನ್ ಜ್ಯೂಸ್ ಕುಡಿಯುವುದರಿಂದ ಕಿಡ್ನಿ ಕಲ್ಲುಗಳು ಕರಗುತ್ತವೆ. ಇದು ತ್ವಚೆಯ ಆರೋಗ್ಯಕ್ಕೆ ಲಾಭದಾಯಕ. ಇದರಿಂದ ಚರ್ಮ ರೋಗಗಳೂ ದೂರವಾಗುತ್ತವೆ.
ಉಗುರು ಬೆಚ್ಚಗಿನ ನೀರಿನಲ್ಲಿ ಲಿಂಬು ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮುಂಜಾನೆಯೇ ಇದನ್ನು ಕುಡಿಯಬೇಕು. ಲಿಂಬು ಜ್ಯೂಸ್ನಿಂದ ದಿನವನ್ನು ಪ್ರಾರಂಭ ಮಾಡುವುದರಿಂದ ನಮ್ಮ ದೇಹಕ್ಕೆ ಹೊಸ ಚೈತನ್ಯ ಬರುವುದರ ಜತೆ, ಇಡೀದಿನ ಶರೀರ ಹೈಡ್ರೇಟ್ ಆಗಿರುತ್ತದೆ. ಅಂದರೆ ನಿರ್ಜಲೀಕರಣವಾಗುವುದು ತಪ್ಪುತ್ತದೆ. ಲಿಂಬುವಿನಲ್ಲಿ ವಿಟಮಿನ್ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳಲ್ಲಿ ನಿಂಬೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ರೆ ಪ್ರತಿದಿನ ಬೆಳಿಗ್ಗೆ ಒಂದು ಲೋಟ ನಿಂಬೆ ಪಾನಕವನ್ನು ಸೇವಿಸಿ ಪರಿಹಾರ ಕಾಣಬಹುದು.
ಬೇಸಿಗೆ ಕಾಲದಲ್ಲಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುವಂತಹ ಹಲವಾರು ಅಂಶಗಳು ನಿಂಬೆಹಣ್ಣಿನಲ್ಲಿವೆ. ಮೊಟ್ಟಮೊದಲನೆಯದಾಗಿ ನಿಂಬೆ ಹಣ್ಣು ಹೆಚ್ಚು ಆಂಟಿ – ಆಕ್ಸಿಡೆಂಟ್ ಅಂಶಗಳನ್ನು ತನ್ನಲ್ಲಿ ಹೊಂದಿದ್ದು, ಜೊತೆಗೆ ವಿಟಮಿನ್ ‘ ಸಿ ‘ ಅಂಶ ಇದರಲ್ಲಿ ಅಧಿಕವಾಗಿದೆ. ವಿಟಮಿನ್ ‘ ಎ ‘, ಬೀಟಾ – ಕ್ಯಾರೋಟಿನ್, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ದೇಹದ ಉರಿಯೂತದ ವಿರುದ್ಧ ಹೋರಾಡುವ ‘ ಫ್ಲೇವನಾಯ್ಡ್ ‘ ಅಂಶಗಳು ನಿಂಬೆ ಹಣ್ಣಿನಲ್ಲಿ ಸಾಕಷ್ಟು ಕಂಡುಬರುತ್ತವೆ.