Friday, October 11, 2024
spot_imgspot_img
spot_imgspot_img

ಸರಕಾರದ ವಿರುದ್ಧ  ಮಾಜಿ ಸಚಿವ ಯುಟಿ ಖಾದರ್ ಕಿಡಿ..!!

- Advertisement -
- Advertisement -

ಮಂಗಳೂರು:* ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರ ಅಮಾನವೀಯ ಅಂತ್ಯಸಂಸ್ಕಾರ‌ ಮಾಡಿದ  ಅಧಿಕಾರಿಗಳ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನೆ ಮಾಡಿದ್ದಾರೆ. ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಗ್ಯರ ಸಚಿವರ ಜಿಲ್ಲೆ ಅಂತಾ ರಿಯಾಯಿತಿ ಕೊಡಲಾಗಿದ್ಯಾ..? ಎಂದು ಪ್ರಶ್ನಿಸಿದ ಅವ್ರು ಈ ಪ್ರಕರಣದ ಕುರಿತು ರಾಜ್ಯ ಮಟ್ಟದ ತನಿಖೆಯಾಗಬೇಕು. ಮುಂದಿನ ದಿನದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಅಂಬುಲೆನ್ಸ್ ಸೇವೆ ಇಲ್ಲ. ಎಲ್ಲಾ ಧರ್ಮದವರಿಗೂ ಸರಿಯಾದ ಅಂತ್ಯಕ್ರಿಯೆ ಮಾಡಲು ಸರ್ಕಾರ ಸ್ಥಳ ಗುರುತಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ  ಕೇಂದ್ರ ಸರ್ಕಾರ 59 ಚೈನಾ ಆ್ಯಪ್ ಬ್ಯಾನ್ ವಿಚಾರದ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಯುಟಿ ಖಾದರ್ ವಿರೋಧ ವ್ಯಕ್ತಪಡಿಸಿದರು. ಚೈನಾ ಗೆ ಆ್ಯಪ್ ನಿಂದ‌ ನಷ್ಟ ಇಲ್ಲ. ಭಾರತಕ್ಕೆ ಆ್ಯಪ್ ಬ್ಯಾನ್ ನಿಂದ ಲಾಭ ಇಲ್ಲ. ಪಿಎಂ ಕೇರ್ ಫಂಡ್ ಗೆ ಟಿಕ್ ಟಾಕ್ ನಿಂದ 30 ಕೋಟಿ ಬಂದಿದೆ. ಆ ಹಣವನ್ನು ಸರ್ಕಾರ ವಾಪಸ್ ಕೊಡಲಿ. ಸರ್ಕಾರ ಅವರ ಹಣವನ್ನು ತೆಗದುಕೊಳ್ಳೋಕೆ ನಾಚಿಕೆ ಆಗೋದಿಲ್ವಾ ಎಂದು ಸವಾಲೆಸೆದ್ರು.

- Advertisement -

Related news

error: Content is protected !!