Sunday, May 19, 2024
spot_imgspot_img
spot_imgspot_img

ಪ್ರಧಾನಿ ಮೋದಿಗೆ ಲಸಿಕೆ ಪೂರೈಕೆಯ ಭರವಸೆ ನೀಡಿದ ಕಮಲಾ ಹ್ಯಾರಿಸ್

- Advertisement -G L Acharya panikkar
- Advertisement -

ನವದೆಹಲಿ: ಭಾರತಕ್ಕೆ ಕರೊನಾ ವೈರಸ್ ಲಸಿಕಾ ಪೂರೈಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜತೆಯಲ್ಲಿ ಗುರುವಾರ ರಾತ್ರಿ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, ಸಂಕಷ್ಟ ಕಾಲದಲ್ಲಿ ಯುಎಸ್ ಸರ್ಕಾರ ಮತ್ತು ಭಾರತೀಯ ವಲಸಿಗರ ಬೆಂಬಲ ಹಾಗೂ ಒಗ್ಗಟ್ಟಿಗೆ ಧನ್ಯವಾದಗಳನ್ನು ತಿಳಿಸಿದರು.

ಜಾಗತಿಕ ಲಸಿಕಾ ಹಂಚಿಕೆ ಕಾರ್ಯತಂತ್ರದ ಅಡಿಯಲ್ಲಿ ಭಾರತ ಸೇರಿದಂತೆ ಇತರೆ ದೇಶಗಳಿಗೂ ಕರೊನಾ ಲಸಿಕೆ ಹಂಚಿಕೆ ಮಾಡುವ ಬಗ್ಗೆ ಅಮೆರಿಕ ಚಿಂತಿಸುತ್ತಿದೆ ಎಂದು ಕಮಲಾ ಹ್ಯಾರಿಸ್ ತಿಳಿಸಿದ್ದಾರೆಂದು ಪ್ರಧಾನಮಂತ್ರಿ ಕಾರ್ಯಾಲಯ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಅಮೆರಿಕದ ನಿರ್ಧಾರಕ್ಕಾಗಿ ಉಪಾಧ್ಯಕ್ಷೆ ಹ್ಯಾರಿಸ್ ಅವರಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಯುಎಸ್ ಸರ್ಕಾರ ಮತ್ತು ಯುಎಸ್?ನಲ್ಲಿರುವ ಭಾರತೀಯ ವಲಸಿಗ ಸಮುದಾಯದಿಂದ ಭಾರತಕ್ಕೆ ದೊರೆತ ಎಲ್ಲಾ ರೀತಿಯ ಬೆಂಬಲ ಮತ್ತು ಒಗ್ಗಟ್ಟಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಪಿಎಂಒ ತಿಳಿಸಿದೆ.

ಈ ಬಗ್ಗೆ ಪ್ರಧಾನಿ ಮೋದಿ ಸಹ ಟ್ವೀಟ್ಮಾಡಿದ್ದು, ಸ್ವಲ್ಪ ಸಮಯದ ಹಿಂದೆ ಕಮಲಾ ಹ್ಯಾರಿಸ್ ಜತೆ ದೂರವಾಣಿಯಲ್ಲಿ ಮಾತನಾಡಿದೆ, ಜಾಗತಿಕ ಲಸಿಕೆ ಹಂಚಿಕೆಗಾಗಿ ಯುಎಸ್ ಕಾರ್ಯತಂತ್ರದ ಭಾಗವಾಗಿ ಭಾರತಕ್ಕೆ ಲಸಿಕೆ ಸರಬರಾಜಿನ ಭರವಸೆಯನ್ನು ನಾನು ಪ್ರಶಂಸಿಸುತ್ತೇನೆ. ಯುಎಸ್ ಸರ್ಕಾರ ಮತ್ತು ಭಾರತೀಯ ವಲಸೆಗಾರರ ಎಲ್ಲ ಬೆಂಬಲ ಮತ್ತು ಒಗ್ಗಟ್ಟಿಗೆ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆಂದು ಹೇಳಿದ್ದಾರೆ.

ಇದೇ ವೇಳೆ ಭಾರತ-ಯುಎಸ್ ಲಸಿಕೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳು ಮತ್ತು ಕೋವಿಡ್ ನಂತರದ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಚೇತರಿಕೆಗೆ ನಮ್ಮ ಸಹಭಾಗಿತ್ವದ ಸಾಮರ್ಥ್ಯದ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

- Advertisement -

Related news

error: Content is protected !!